ಇಸ್ರೇಲ್‍ಗೆ ಸಹಕರಿಸಿದ ಆರೋಪ | 12 ಮಂದಿಯ ಬಂಧಿಸಿದ ಇರಾನ್

Update: 2024-09-23 15:33 GMT

PC : AP

ಟೆಹ್ರಾನ್ : ದೇಶದ ಬದ್ಧವೈರಿ ಇಸ್ರೇಲ್ ಜತೆ ಸಹಕರಿಸಿದ ಆರೋಪದಲ್ಲಿ 12 ಮಂದಿಯನ್ನು ಬಂಧಿಸಿರುವುದಾಗಿ ಇರಾನ್ ಸರಕಾರದ ಮೂಲಗಳನ್ನು ಉಲ್ಲೇಖಿಸಿ `ಫಾರ್ಸ್' ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶದ 6 ಪ್ರಾಂತಗಳಲ್ಲಿ ಯೆಹೂದಿ ಆಡಳಿತ(ಇಸ್ರೇಲ್)ದ ಜತೆ ಸಹಕರಿಸುತ್ತಿದ್ದ 12 ಮಂದಿಯನ್ನು ರೆವೊಲ್ಯುಷನರಿ ಗಾಡ್ರ್ಸ್ ಬಂಧಿಸಿದೆ. ಆರೋಪಿಗಳು ಇರಾನ್‍ನ ಭದ್ರತೆಗೆ ವಿರುದ್ಧವಾದ ಕೃತ್ಯ ಎಸಗಲು ಯೋಜನೆ ರೂಪಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇರಾನ್‍ನ ಹಲವು ಪರಮಾಣು ಸ್ಥಾವರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹಾಗೂ ಹಲವು ವಿಜ್ಞಾನಿಗಳನ್ನು ಹತ್ಯೆ ಮಾಡಲು ಇಸ್ರೇಲ್ ಸಂಚು ನಡೆಸುತ್ತಿದೆ ಎಂದು ಇರಾನ್ ಆರೋಪಿಸುತ್ತಿದೆ. ಇಸ್ರೇಲ್‍ನ ಗುಪ್ತಚರ ಇಲಾಖೆ ಮೊಸಾದ್ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಕಳೆದ ಡಿಸೆಂಬರ್ ನಲ್ಲಿ ಇರಾನ್ ಗಲ್ಲಿಗೇರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News