ಅಮೆರಿಕದ ಬಿ-52 ಬಾಂಬರ್ ನಿಯೋಜನೆಗೆ ಇರಾನ್ ಖಂಡನೆ

Update: 2024-11-04 16:42 GMT

ಟೆಹ್ರಾನ್ : ಈ ಪ್ರದೇಶದಲ್ಲಿ ಬಿ-52 ಬಾಂಬರ್ ವಿಮಾನಗಳನ್ನು ಅಮೆರಿಕ ನಿಯೋಜಿಸಿರುವುದು ಅಸ್ಥಿರಗೊಳಿಸುವ ಉಪಕ್ರಮ ಎಂದು ಇರಾನ್ ನ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ ಸೋಮವಾರ ಟೀಕಿಸಿದ್ದಾರೆ.

`ಈ ವಲಯದಲ್ಲಿ ಅಮೆರಿಕದ ಬಿ-52 ಬಾಂಬರ್ಗಳ ಉಪಸ್ಥಿತಿ ಅಸ್ಥಿರಗೊಳಿಸುವ ಕ್ರಮವಾಗಿದೆ. ಆದರೆ ಇದು ತನ್ನನ್ನು ರಕ್ಷಿಸಿಕೊಳ್ಳುವ ಇರಾನ್ ನ ಸಂಕಲ್ಪವನ್ನು ತಡೆಯುವುದಿಲ್ಲ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ. ಅಕ್ಟೋಬರ್ 26ರಂದು ಇರಾನ್ ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಇರಾನ್ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಪ್ರಾಚ್ಯದಲ್ಲಿ ಬಿ-52 ಬಾಂಬರ್ಗಳನ್ನು ನಿಯೋಜಿಸುವುದಾಗಿ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News