ವಿಶ್ವಸಂಸ್ಥೆಯಿಂದ ಇಸ್ರೇಲ್ ಉಚ್ಛಾಟನೆಗೆ ಇರಾನ್ ಆಗ್ರಹ
Update: 2024-11-11 16:37 GMT
ಟೆಹ್ರಾನ್ : ಸಿರಿಯಾದ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಇಸ್ರೇಲ್ ನ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಿ ಅದನ್ನು ವಿಶ್ವಸಂಸ್ಥೆಯಿಂದ ಉಚ್ಛಾಟಿಸಬೇಕೆಂದು ಇರಾನ್ ನ ವಿದೇಶಾಂಗ ಇಲಾಖೆ ರವಿವಾರ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.
ಸಿರಿಯಾ ರಾಜಧಾನಿ ದಮಾಸ್ಕಸ್ ಬಳಿಯ ಜನವಸತಿ ಕಟ್ಟಡವೊಂದನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಸಹಿತ 9 ಮಂದಿ ಮೃತಪಟ್ಟಿರುವುದಾಗಿ ಮಾನವ ಹಕ್ಕುಗಳ ನಿಗಾ ಸಂಸ್ಥೆ ವರದಿ ಮಾಡಿದೆ. ಸಿರಿಯಾ ವಿರುದ್ಧ ಇಸ್ರೇಲ್ ನ ನಿರಂತರ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ ವಿಧಿಸಿ ಅದನ್ನು ವಿಶ್ವಸಂಸ್ಥೆಯಿಂದ ಉಚ್ಛಾಟಿಸುವಂತೆ ಇರಾನ್ ವಿದೇಶಾಂಗ ಇಲಾಖೆಯ ವಕ್ತಾರ ಇಸ್ಮಾಯಿಲ್ ಬಘೈ ಆಗ್ರಹಿಸಿದ್ದಾರೆ.