ಒಬ್ಬನೇ ವ್ಯಕ್ತಿಯನ್ನು `ಎರಡನೇ' ಬಾರಿ ಗಲ್ಲಿಗೇರಿಸಿದ ಇರಾನ್!

Update: 2024-11-13 16:29 GMT

ಸಾಂದರ್ಭಿಕ ಚಿತ್ರ | NDTV

ಟೆಹ್ರಾನ್: ಇರಾನ್‌ ನಲ್ಲಿ 26 ವರ್ಷದ ವ್ಯಕ್ತಿಯನ್ನು ಬುಧವಾರ ಎರಡನೇ ಬಾರಿಗೆ ಗಲ್ಲಿಗೇರಿಸಲಾಗಿದೆ. ಒಂದು ತಿಂಗಳ ಹಿಂದೆ ಈ ವ್ಯಕ್ತಿಗೆ ಮರಣದಂಡನೆಯನ್ನು ಅರ್ಧ ನಿಮಿಷದ ಬಳಿಕ ನಿಲ್ಲಿಸಲಾಗಿತ್ತು ಎಂದು ಸರಕಾರೇತರ ಸಂಘಟನೆ ಹೇಳಿದೆ.

ಕೊಲೆ ಆರೋಪದಲ್ಲಿ 26 ವರ್ಷದ ಅಹ್ಮದ್ ಅಲಿಝಾದೆ ಎಂಬ ಯುವಕನನ್ನು 2018ರ ಅಕ್ಟೋಬರ್ ನಲ್ಲಿ ಬಂಧಿಸಲಾಗಿದ್ದು ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಟೆಹ್ರಾನ್‌ ನ ಹೊರಗಿನ ಕರಾಜ್ ನಗರದ ಘೆಜೆಲ್ ಹೆಸಾರ್ ಜೈಲಿನಲ್ಲಿ ಎಪ್ರಿಲ್ 27ರಂದು ಶಿಕ್ಷೆ ಜಾರಿಗೊಳಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ನೇಣುಬಿಗಿದ 28 ಸೆಕೆಂಡ್‍ಗಳಲ್ಲಿ ಸಂತ್ರಸ್ತ(ಕೊಲೆಯಾದ ವ್ಯಕ್ತಿಯ) ಕುಟುಂಬದವರು ಇದ್ದಕ್ಕಿದ್ದಂತೆಯೇ `ಕ್ಷಮಿಸಿ' ಎಂದು ಕೂಗಿದ್ದರಿಂದ ಆತನನ್ನು ನೇಣುಗಂಬದಿಂದ ಕೆಳಗಿಳಿಸಲಾಯಿತು.

ಇರಾನ್‌ ನ ಕಾನೂನಿನಡಿ, ಸಂತ್ರಸ್ತನ ಕುಟುಂಬವು ಪರಿಹಾರ ಹಣವನ್ನು ಪಡೆಯಲು ಒಪ್ಪಿಕೊಂಡರೆ ಆರೋಪಿಯನ್ನು ಶಿಕ್ಷೆಯಿಂದ ಪಾರು ಮಾಡಬಹುದು. ಆದರೆ ಈ ಪ್ರಕರಣದಲ್ಲಿ ಪರಿಹಾರ ಹಣದ ಬಗ್ಗೆ ಸಹಮತ ಮೂಡದ ಕಾರಣ ಆರೋಪಿಯನ್ನು ಬುಧವಾರ ಎರಡನೇ ಬಾರಿಗೆ ಗಲ್ಲಿಗೇರಿಸಲಾಗಿದೆ ಎಂದು ನಾರ್ವೆ ಮೂಲದ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News