ಇರಾನ್ | ಹೆಲಿಕಾಪ್ಟರ್ ದುರಂತದಲ್ಲಿ ಯೋಧನ ಸಹಿತ ಇಬ್ಬರ ಮೃತ್ಯು

Update: 2024-11-04 15:40 GMT

ಸಾಂದರ್ಭಿಕ ಚಿತ್ರ (PTI)

ಟೆಹ್ರಾನ್ : ಪ್ರಕ್ಷುಬ್ಧ ಈಶಾನ್ಯ ಪ್ರಾಂತದಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯ ಸಂದರ್ಭ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ರೆವೊಲ್ಯುಷನರಿ ಗಾಡ್ರ್ಸ್(ಐಆರ್ಜಿ) ಕಮಾಂಡರ್ ಹಾಗೂ ಪೈಲಟ್ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತದ ಗಡಿ ಪ್ರದೇಶದಲ್ಲಿರುವ ಸಿರ್ಕಾನ್ ಹೋರಾಟಗಾರರ ವಿರುದ್ಧ ನಡೆಸುತ್ತಿದ್ದ ಕಾರ್ಯಾಚರಣೆ ಸಂದರ್ಭ ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾಗಿದೆ. ಗೊಲೆಸ್ತಾನ್ ಪ್ರಾಂತದ ನಿನೆವೆಹ್ ಬ್ರಿಗೇಡ್ ನ ಕಮಾಂಡರ್ ಹಾಗೂ ಐಆರ್ಜಿಸಿ ಪದಾತಿ ಪಡೆಯ ಪೈಲಟ್ ಮೃತಪಟ್ಟಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಇರ್ನಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತವು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು ಅಕ್ಟೋಬರ್ 26ರಂದು ಸುನ್ನಿ ಮುಸ್ಲಿಮ್ ಸಶಸ್ತ್ರ ಹೋರಾಟಗಾರರ ದಾಳಿಯಲ್ಲಿ 10 ಪೊಲೀಸ್ ಅಧಿಕಾರಿಗಳು ಹತರಾದ ಬಳಿಕ ಈ ಪ್ರದೇಶದಲ್ಲಿ ಇರಾನ್ ನ ಸಶಸ್ತ್ರ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News