ಗಾಝಾದ ಆರೋಗ್ಯಪಾಲನಾ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುತ್ತಿರುವ ಇಸ್ರೇಲ್ : ವಿಶ್ವಸಂಸ್ಥೆಯ ತನಿಖಾ ಆಯೋಗದ ಆರೋಪ

Update: 2024-10-10 16:40 GMT

PC : NDTV 

ಜಿನೇವಾ : ಇಸ್ರೇಲ್ ಉದ್ದೇಶಪೂರ್ವಕವಾಗಿ ಗಾಝಾದಲ್ಲಿ ವೈದ್ಯಕೀಯ ಸಂಸ್ಥಾಪನೆಗಳನ್ನು ಗುರಿಯಿಸಿ ನಾಶಪಡಿಸುತ್ತಿದೆ. ವೈದ್ಯಕೀಯ ಸಿಬ್ಬಂದಿಗಳಿಗೆ ಚಿತ್ರಹಿಂಸೆ ನೀಡಿ ಅವರನ್ನು ಹತ್ಯೆಗೈಯುತ್ತಿದೆ ಎಂದು ವಿಶ್ವಸಸ್ಥೆಯ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಇಸ್ರೇಲ್ ಮಾನವತೆಯ ವಿರುದ್ಧ ಅಪರಾಧಗಳನ್ನು ಎಸುಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಝಾದ ಮೇಲೆ ವಿಸ್ತೃತವಾದ ಆಕ್ರಮಣವನ್ನು ನಡೆಸುವ ತನ್ನ ಯೋಜನೆಯ ಭಾಗವಾಗಿ ಅಲ್ಲಿನ ಆರೋಗ್ಯಪಾಲನಾ ವ್ಯವಸ್ಥೆಯನ್ನು ನಾಶಪಡಿಸುವ ಸಂಘಟಿತ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಸ್ರೇಲ್ ಹಾಗೂ ಫೆಲೆಸ್ತೀನ್ ಪ್ರಾಂತಗಳಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ನಡೆಯುತ್ತಿರುವ ಆರೋಪಗಳ ಕುರಿತ ತನಿಖೆಗಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯು 2021ರಲ್ಲಿ ತ್ರಿಸದಸ್ಯ ಆಯೋಗವನ್ನು ರಚಿಸಿತ್ತು.

ಇಸ್ರೇಲ್‌ನಲ್ಲಿ ಬಂಧಿತರಾಗಿರುವ ಫೆಲೆಸ್ತೀನಿಯರು ಹಾಗೂ ಗಾಝಾದಲ್ಲಿನ ಒತ್ತೆಯಾಳುಗಳ ಮೇಲೆ ನಡೆದಿರುವ ದೌರ್ಜನ್ಯಗಳ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ. ಇಸ್ರೇಲ್ ಸೇನೆ ಹಾಗೂ ಫೆಲೆಸ್ತೀನ್‌ನ ಸಶಸ್ತ್ರ ಗುಂಪುಗಳೆರಡೂ ಚಿತ್ರಹಿಂಸೆ ಹಾಗೂ ಲಿಂಗಾಧಾರಿತ ಹಿಂಸಾಚಾರದಲ್ಲಿ ತೊಡಗಿವೆಯೆಂದು ಅದು ಆಪಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News