ಇಸ್ರೇಲ್ ದಾಳಿ | ಗಾಝಾದಲ್ಲಿ 38 ಮಂದಿ ಮೃತ್ಯು

Update: 2024-10-25 16:14 GMT

PC : PTI 

ಗಾಝಾ : ದಕ್ಷಿಣ ಗಾಝಾ ಪಟ್ಟಿಯ ಖಾನ್ ಯೂನಿಸ್ ನಗರದಲ್ಲಿ ಗುರುವಾರ ರಾತ್ರಿಯಿಂದ ಮುಂದುವರಿದಿರುವ ಇಸ್ರೇಲ್ ಮಿಲಿಟರಿಯ ದಾಳಿಯಲ್ಲಿ ಕನಿಷ್ಟ 38 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಗಾಝಾದಲ್ಲಿನ ಆಸ್ಪತ್ರೆಯ ಮೇಲೆ ರಾತ್ರಿ ಇಸ್ರೇಲ್ ಪಡೆ ದಾಳಿ ನಡೆಸಿರುವುದಾಗಿ ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಆಗ್ನೇಯ ಖಾನ್‍ಯೂನಿಸ್‍ನ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಝಾದ ಆರೋಗ್ಯ ಇಲಾಖೆ ಹೇಳಿದೆ.

ದಕ್ಷಿಣ ಗಾಝಾ ಪಟ್ಟಿಯಲ್ಲಿ ನಡೆಸಿದ ದಾಳಿಯಲ್ಲಿ ಹಮಾಸ್‍ನ ಹಲವು ಸದಸ್ಯರು ಹತರಾಗಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.

ಇಸ್ರೇಲ್ ಪಡೆಗಳು ಗಾಝಾದ ಉತ್ತರದಲ್ಲಿರುವ ಕಮಲ್ ಅಡ್ವಾನ್ ಆಸ್ಪತ್ರೆಗೆ ನುಗ್ಗಿವೆ. ಗುರುವಾರ ತಡರಾತ್ರಿ ಇಸ್ರೇಲ್ ಸೇನೆಯ ಟ್ಯಾಂಕ್‍ಗಳು ಹಾಗೂ ಬುಲ್ಡೋಝರ್‍ಗಳು ಆಸ್ಪತ್ರೆಯನ್ನು ಸುತ್ತುವರಿದು ಆಸ್ಪತ್ರೆಯತ್ತ ಗುಂಡಿನ ದಾಳಿ ನಡೆಸಿದ್ದು ಆಸ್ಪತ್ರೆಯಿಂದ ತೆರಳುವಂತೆ ಸಿಬ್ಬಂದಿಗಳಿಗೆ ಮತ್ತು ರೋಗಿಗಳಿಗೆ ಸೂಚಿಸಿದೆ.

ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ ಆಂಬ್ಯುಲೆನ್ಸ್ ಆಸ್ಪತ್ರೆಗೆ ಆಗಮಿಸಿ 40 ರೋಗಿಗಳನ್ನು ಅಲ್ಲಿಂದ ತೆರವುಗೊಳಿಸಿದೆ ಎಂದು ಆಸ್ಪತ್ರೆಯ ನಿರ್ದೇಶಕರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News