ಲೆಬನಾನ್ ಮೇಲೆ ಇಸ್ರೇಲ್ ದಾಳಿ : ಹಿಜ್ಬುಲ್ಲಾ ಕಮಾಂಡರ್ ಸಾವು

Update: 2024-04-08 17:27 GMT
PC : aljazeera.com

ಟೆಲ್‍ಅವೀವ್ : ಲೆಬನಾನ್ ಮೇಲೆ ರವಿವಾರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ ಸೋಮವಾರ ಹೇಳಿದೆ.

ದಕ್ಷಿಣ ಲೆಬನಾನ್‍ನ ಅಸ್-ಸುಲ್ತಾನಿಯಾ ಪ್ರದೇಶದಲ್ಲಿ ಇಸ್ರೇಲ್‍ನ ಯುದ್ಧವಿಮಾನಗಳು ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಪ್ರಮುಖ `ರದ್ವಾನ್ ಪಡೆ'ಯ ಕಮಾಂಡರ್ ಅಲಿ ಅಹ್ಮದ್ ಹುಸೈನ್ ಹತನಾಗಿದ್ದಾನೆ. ದಾಳಿಯಲ್ಲಿ ಇತರ ಮೂವರು ಹಿಜ್ಬುಲ್ಲಾ ಹೋರಾಟಗಾರರೂ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಈ ಮಧ್ಯೆ, ಲೆಬನಾನ್‍ನಿಂದ ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್‍ಗೆ ಹತ್ತಕ್ಕೂ ಅಧಿಕ ಕ್ಷಿಪಣಿ ದಾಳಿ ನಡೆದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್‍ಜಝೀರಾ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News