ಹಿಜ್ಬುಲ್ಲಾಕ್ಕೆ ಸೇರಿದ 1000 ರಾಕೆಟ್ ಲಾಂಚರ್ ಬ್ಯಾರಲ್ ಗಳನ್ನು ಹೊಡೆದುರುಳಿಸಿದ ಇಸ್ರೇಲ್
ಜೆರುಸಲೇಂ: ಇಸ್ರೇಲ್ ಫೈಟರ್ ಜೆಟ್‌ಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾಕ್ಕೆ ಸೇರಿದ 1000 ಬ್ಯಾರಲ್ ಗಳನ್ನು ಒಳಗೊಂಡಿದ್ದ 100 ಕ್ಷಿಪಣಿ ಲಾಂಚರ್ ಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಕ್ಷಿಪಣಿ ಲಾಂಚರ್ ಗಳನ್ನು ಪೇಜರ್ ದಾಳಿಗೆ ಪ್ರತಿದಾಳಿಯಾಗಿ ಇಸ್ರೇಲ್ ವಿರುದ್ಧ ಬಳಸಲು ಹಿಜ್ಬುಲ್ಲಾ ಸಿದ್ಧತೆ ನಡೆಸಿತ್ತು ಎನ್ನಲಾಗಿದೆ.
ನಿನ್ನೆ ಮಧ್ಯಾಹ್ನದ ನಂತರ, ಫೈಟರ್ ಜೆಟ್‌ಗಳು ಸುಮಾರು 1,000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು ಹೊಡೆದು ಹಾಕಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇಸ್ರೇಲ್ ಅನ್ನು ರಕ್ಷಿಸುವ ಸಲುವಾಗಿ ಹಿಜ್ಬುಲ್ಲಾದ ಸಾಮರ್ಥ್ಯಗಳನ್ನು ಕೆಡಿಸಲು ಕಾರ್ಯಾಚರಣೆಯನ್ನು ಮುಂದುವರೆಸುತ್ತೇವೆ ಎಂದು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆ) ತಿಳಿಸಿದೆ.
ಲೆಬನಾನ್ ನಲ್ಲಿ ಪೇಜರ್‌ಗಳ ಮತ್ತು ವಾಕಿ-ಟಾಕಿಗಳ ಮೂಲಕ ಇಸ್ರೇಲ್ ನಡೆಸಿದ ಸ್ಪೋಟಕ್ಕೆ ತಕ್ಕ ಪ್ರತಿಕಾರ ನೀಡುವುದಾಗಿ ಹಿಜ್ಬುಲ್ಲಾದ ಮುಖ್ಯಸ್ಥ ಹಸನ್ ನಸ್ರಲ್ಲಾ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ಪೇಜರ್‌ಗಳ ದಾಳಿಗೆ 37 ಜನರು ಬಲಿಯಾಗಿದ್ದರು ಹಾಗೂ 3,000 ಜನರು ಗಾಯಗೊಂಡಿದ್ದರು.