ಇಸ್ರೇಲ್ ಜತೆ ಕದನವಿರಾಮ ಒಪ್ಪಂದಕ್ಕೆ ಸಿದ್ಧ : ಹಿಜ್ಬುಲ್ಲಾ ವರಿಷ್ಠ ಕಾಸಿಮ್

Update: 2024-10-31 15:45 GMT

 ನಯೀಮ್ ಕಾಸಿಮ್ |  PC : PTI 

ಬೈರುತ್ : ಕೆಲವು ಷರತ್ತುಗಳಡಿ ಕದನ ವಿರಾಮಕ್ಕೆ ತಮ್ಮ ಸಂಘಟನೆ ಸಿದ್ಧವಿದೆ ಎಂದು ಹಿಜ್ಬುಲ್ಲಾದ ನೂತನ ವರಿಷ್ಠ ನಯೀಮ್ ಕಾಸಿಮ್ ಹೇಳಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾದ ಹಸನ್ ನಸ್ರಲ್ಲಾರ ಉತ್ತರಾಧಿಕಾರಿಯಾಗಿ ಕಾಸಿಮ್ ಮಂಗಳವಾರ ನೇಮಕಗೊಂಡಿದ್ದಾರೆ. `ಲೆಬನಾನ್‌ ನಲ್ಲಿ ಇಸ್ರೇಲ್‍ ನ ವೈಮಾನಿಕ ದಾಳಿ ಮತ್ತು ಭೂ ಕಾರ್ಯಾಚರಣೆಯನ್ನು ದೀರ್ಘಾವಧಿ ತಡೆಯುವ ಸಾಮರ್ಥ್ಯ ನಮಗಿದೆ. ಆದರೆ ಒಂದು ವೇಳೆ ಆಕ್ರಮಣವನ್ನು ನಿಲ್ಲಿಸಲು ಇಸ್ರೇಲ್ ನಿರ್ಧರಿಸಿದರೆ ನಾವದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಪರಿಸ್ಥಿತಿ ನಮಗೆ ಸೂಕ್ತವೆನಿಸಿದರೆ ಮಾತ್ರ ನಮ್ಮ ಸಮ್ಮತಿಯಿದೆ. ಇದುವರೆಗೂ ಕದನ ವಿರಾಮದ ಬಗ್ಗೆ ವಿಶ್ವಾಸಾರ್ಹ ಪ್ರತಿಪಾದನೆ ಲಭಿಸಿಲ್ಲ' ಎಂದವರು ಹೇಳಿದ್ದಾರೆ.

ಈ ಮಧ್ಯೆ, ಸಂಭಾವ್ಯ ಕದನ ವಿರಾಮದ ಬಗ್ಗೆ ಚರ್ಚಿಸಲು ಇಸ್ರೇಲ್‍ ನ ಭದ್ರತಾ ಕ್ಯಾಬಿನೆಟ್ ಸಭೆ ಸೇರಿರುವುದಾಗಿ ವರದಿಯಾಗಿದೆ. ಕದನ ವಿರಾಮ ಕೆಲವೇ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಸಾಧ್ಯವಾಗಬಹುದು ಎಂದು ಆಶಿಸುವುದಾಗಿ ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News