ಲೆಬನಾನ್: ಇಸ್ರೇಲ್ ದಾಳಿಗೆ ಮೂವರು ಪತ್ರಕರ್ತರು ಮೃತ್ಯು

Update: 2024-10-25 06:26 GMT

ಸಾಂದರ್ಭಿಕ ಚಿತ್ರ (PTI)

ಲೆಬನಾನ್: ಆಗ್ನೇಯ ಲೆಬನಾನ್‌ ನಲ್ಲಿ ವಸತಿಗೃಹವೊಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ನ ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಮೂವರು ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ನಮ್ಮ ಕ್ಯಾಮರಾ ಮ್ಯಾನ್ ಘಾಸನ್ ನಜರ್ ಮತ್ತು ತಾಂತ್ರಿಕ ಸಹಾಯಕ ಮೊಹಮ್ಮದ್ ರಿದಾ ಮೃತಪಟ್ಟಿದ್ದಾರೆ ಎಂದು ಬೈರುತ್ ಮೂಲದ ಅಲ್-ಮಯಾದೀನ್ ಟಿವಿ (Al-Mayadeen TV) ಹೇಳಿದೆ.

ಇದಲ್ಲದೆ, ಹಸ್ಬಯಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನಮ್ಮ ಕ್ಯಾಮೆರಾ ಮ್ಯಾನ್ ವಿಸ್ಸಾಮ್ ಖಾಸಿಮ್ ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾಗೆ ಸೇರಿದ ಅಲ್-ಮನಾರ್ ಟಿವಿ(Al-Manar TV) ಹೇಳಿದೆ.

ಇಸ್ರೇಲ್ ದಾಳಿಗೆ ಕಳೆದ 24 ಗಂಟೆಗಳಲ್ಲಿ ಲೆಬನಾನ್ ನಲ್ಲಿ ‌ಕನಿಷ್ಠ 19 ಜನರು ಮೃತಪಟ್ಟಿದ್ದು, ದಾಳಿ ಪ್ರಾರಂಭವಾದಾಗಿನಿಂದ ಈವರೆಗಿನ ಒಟ್ಟು ಮೃತರ ಸಂಖ್ಯೆ 2,593ಕ್ಕೆ ಏರಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News