ಗಾಝಾದ ಮೇಲೆ ಮುಂದುವರಿದ ಇಸ್ರೇಲ್ ದಾಳಿ | 55 ನಾಗರಿಕರ ಹತ್ಯೆ

Update: 2024-11-02 16:10 GMT

                                                                         Photo:PTI

ಗಾಝಾ: ಇಸ್ರೇಲ್ ಗಾಝಾದಲ್ಲಿ ನರಮೇಧ ಮುಂದುವರಿಸಿದ್ದು, ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಕನಿಷ್ಠ 55 ನಾಗರಿಕರನ್ನು ಇಸ್ರೇಲ್ ಸೇನೆ ಹತ್ಯೆ ನಡೆಸಿದೆ ಎಂದು AL JAZEERA ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ ಮತ್ತು 192 ಜನರು ಗಾಯಗೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದಕ್ಕೂ ಮೊದಲು ದೇರ್ ಅಲ್-ಬಾಲಾಹ್, ನುಸೀರಾತ್ ಶಿಬಿರ ಮತ್ತು ಅಲ್-ಝವಾಯ್ದ ಶಿಬಿರಗಳನ್ನು ಗುರಿಯಾಗಿಸಿ ಇಸ್ರೇಲ್ ಬಾಂಬ್ ದಾಳಿ ನಡೆಸಿವೆ. ದಾಳಿಯಲ್ಲಿ ಆಸ್ಪತ್ರೆಯೊಂದಕ್ಕೆ ಹಾನಿಯಾಗಿದೆ. ಕನಿಷ್ಠ 47 ಫೆಲೆಸ್ತೀನೀಯರು ಮೃತಪಟ್ಟು, 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿತ್ತು.

ಲೆಬನಾನ್‌ನ ಬೆಕಾ ಕಣಿವೆಯಲ್ಲಿ ಕನಿಷ್ಠ 25 ಪಟ್ಟಣಗಳು ಮತ್ತು ಗ್ರಾಮಗಳ ಮೇಲೆ ಇಸ್ರೇಲ್ ದಾಳಿಯನ್ನು ನಡೆಸಿದೆ. ಲೆಬನಾನ್‌ನಲ್ಲಿ, ಇಸ್ರೇಲ್ ದಾಳಿಯಲ್ಲಿ ಕನಿಷ್ಠ 2,897 ಜನರು ಮೃತಪಟ್ಟಿದ್ದಾರೆ ಮತ್ತು 13,150 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News