ಇಸ್ರೇಲ್ ಮೇಲೆ 100 ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ಇರಾನ್

Update: 2024-10-01 17:38 GMT

ಸಾಂದರ್ಭಿಕ ಚಿತ್ರ | PC : PTI

ಟೆಲ್ ಅವೀವ್ : ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಮಂಗಳವಾರ ದೃಢಪಡಿಸಿದೆ.

ಲೆಬನಾನ್ ನ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿ, ಹಿಜ್ಬುಲ್ಲಾ ಕಮಾಂಡರ್ಗಳನ್ನು ಹತ್ಯೆಗೈದ ಮೇಲೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ಹೆಚ್ಚಿದೆ.

ಇಸ್ರೇಲ್ ನಾಗರೀಕರು ಬಾಂಬ್ ಶೆಲ್ಟರ್‌ಗಳ ಸಮೀಪದಲ್ಲಿಯೇ ಇರುವಂತೆ ಆದೇಶಿಸಿದಾಗ ದೇಶದಾದ್ಯಂತ ವಾಯುದಾಳಿ ಸೈರನ್‌ಗಳು ಮೊಳಗಿದೆ ಎಂದು ವರದಿಯಾಗಿದೆ. ಇರಾನ್ ದಾಳಿ ನಡೆಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ಮತ್ತು ಅಮೆರಿಕ ಈಗಾಗಲೇ ಎಚ್ಚರಿಸಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.

ಜೆರಸೆಲೆಂ ಬಳಿ ಇರುವ ಟಿ ವಿ ಕೇಂದ್ರಗಳು, ಮಧ್ಯ ಇಸ್ರೇಲ್ ನ ಕೆಲವು ಭಾಗಗಳಲ್ಲಿ ಅಪಾಯದ ಮುನ್ಸೂಚನೆ ನೀಡುವ ಆದೇಶಗಳನ್ನು ಜನರ ಮೊಬೈಲ್ ಫೋನ್ಗಳಿಗೆ ಕಳುಹಿಸಲಾಗಿದೆ. ದೂರದರ್ಶನದ ಮೂಲಕವೂ ಜಾಗೃತರಾಗಿರುವಂತೆ ಅಪಾಯದ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News