ಗಾಝಾ: ಇಸ್ರೇಲ್ ಸೇನೆಯಿಂದ ತಾಯಿ, ನಾಲ್ವರು ಮಕ್ಕಳ ಹತ್ಯೆ
Update: 2024-09-23 06:38 GMT
ಗಾಝಾ: ಇಸ್ರೇಲ್ ಪಡೆಗಳು ಗಾಝಾ ಮೇಲೆ ಆಕ್ರಮಣವನ್ನು ಮುಂದುವರಿಸಿದ್ದು, ಡೀರ್ ಎಲ್-ಬಾಲಾಹ್ ನಲ್ಲಿ ನಡೆಸಿದ ದಾಳಿಯಲ್ಲಿ ತಾಯಿ ಮತ್ತು ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ.
ಇದಲ್ಲದೆ ನಿರಾಶ್ರಿತರಿದ್ದ ಶಾಲೆಯ ಮೇಲೆ ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ 10 ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ ಎಂದು Al Jazeera ಮಾಧ್ಯಮ ವರದಿ ಮಾಡಿದೆ.
2023ರ ಅ.7ರಂದು ಇಸ್ರೇಲ್ ಗಾಝಾ ಮೇಲೆ ಯುದ್ಧ ಘೋಷಿಸಿ ದಾಳಿಯನ್ನು ಪ್ರಾರಂಭಿಸಿದ ಬಳಿಕ ಗಾಝಾದಲ್ಲಿ ಈವರೆಗೆ 41,431ಕ್ಕೂ ಅಧಿಕ ಮಂದಿಯ ಹತ್ಯೆ ನಡೆದಿರುವುದನ್ನು ಅಂಕಿ-ಅಂಶಗಳು ತೋರಿಸುತ್ತಿದೆ. ಇದಲ್ಲದೆ 95,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಮಧ್ಯೆ ಇಸ್ರೇಲ್ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ದಾಳಿಯನ್ನು ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಪೂರ್ಣ ಪ್ರಮಾಣದ ಯುದ್ಧದ ಬಗ್ಗೆ ಕಳವಳಗಳನ್ನು ಕೂಡ ಹುಟ್ಟು ಹಾಕಿದೆ.