ನಸ್ರುಲ್ಲಾ ಹತ್ಯೆಗೆ ಅಮೆರಿಕ ನಿರ್ಮಿತ ಬಾಂಬ್ ಬಳಸಿದ ಇಸ್ರೇಲ್

Update: 2024-09-30 16:42 GMT

ಹಸನ್ ನಸ್ರುಲ್ಲಾ | PC : NDTV

ವಾಷಿಂಗ್ಟನ್: ಬೈರುತ್‍ನಲ್ಲಿ ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಹತ್ಯೆಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಅಮೆರಿಕ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಬಳಸಿದೆ ಎಂದು ಅಮೆರಿಕದ ಸೆನೆಟರ್ ಮಾರ್ಕ್ ಕೆಲ್ಲಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಬಂಕರ್ ಬಸ್ಟರ್ಸ್(ಬಂಕರ್ ಸ್ಫೋಟಿಸುವ) ಮಾರ್ಕ್ 84 ಶ್ರೇಣಿಯ 900 ಕಿ.ಗ್ರಾಂ. ಬಾಂಬ್‍ಗಳನ್ನು ಕಳೆದ ವಾರ ಇಸ್ರೇಲ್ ವಾಯುಪಡೆ ಹಿಜ್ಬುಲ್ಲಾ ಪ್ರಧಾನ ಕಚೇರಿಯ ಮೇಲೆ ಹಾಕಿದೆ. ಈಗ ನಡೆಯುತ್ತಿರುವ ಸಂಘರ್ಷದಲ್ಲಿ ನಿರ್ದೇಶಿತ ಶಸ್ತ್ರಾಸ್ತ್ರಗಳು, ಜೆಡಿಎಎಂಗಳನ್ನು ಹೆಚ್ಚು ಬಳಸಲಾಗುತ್ತಿರುವುದರಿಂದ ಈ ಶಸ್ತ್ರಾಸ್ತ್ರ ಪೂರೈಕೆಯನ್ನು ನಾವು ಮುಂದುವರಿಸುತ್ತೇವೆ ಎಂದು ಶಸ್ತ್ರಾಸ್ತ್ರ ಸೇವೆಗಳಿಗೆ ಸಂಬಂಧಿಸಿದ ಅಮೆರಿಕ ಸಂಸತ್‍ನ ಉಪಸಮಿತಿ ಅಧ್ಯಕ್ಷ ಮಾರ್ಕ್ ಕೆಲ್ಲಿ ಹೇಳಿದ್ದಾರೆ. ಜೆಡಿಎಎಂಗಳು ಅನಿರ್ದೇಶಿತ ಬಾಂಬ್‍ಗಳನ್ನು ನಿರ್ದೇಶಿತ ಬಾಂಬ್‍ಗಳಾಗಿ ಪರಿವರ್ತಿಸುತ್ತದೆ. ದೀರ್ಘಕಾಲದಿಂದಲೂ ಇಸ್ರೇಲ್‍ನ ಮಿತ್ರನಾಗಿರುವ ಅಮೆರಿಕ ಆ ದೇಶಕ್ಕೆ ಅತೀ ಹೆಚ್ಚು ಶಸ್ತ್ರಾಸ್ತ್ರ ಪೂರೈಸುತ್ತಿದೆ.

ನಸ್ರುಲ್ಲಾ ಹತ್ಯೆಗೆ ದಾಳಿ ನಡೆಸುವುದಕ್ಕೂ ಮುನ್ನ ಇಸ್ರೇಲ್ ಮಾಹಿತಿ ನೀಡಿಲ್ಲ. ಬಾಂಬ್ ದಾಳಿಗೆ ಕೆಲ ಕ್ಷಣಗಳ ಮೊದಲು ಅಧ್ಯಕ್ಷ ಬೈಡನ್‍ಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿ `ದಿ ಗಾರ್ಡಿಯನ್' ವರದಿ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News