ಐರ್ಲೆಂಡ್‍ನಲ್ಲಿ ರಾಯಭಾರಿ ಕಚೇರಿ ಮುಚ್ಚಲು ಇಸ್ರೇಲ್ ನಿರ್ಧಾರ

Update: 2024-12-16 16:37 GMT

PC : NDTV

ಟೆಲ್‍ಅವೀವ್: ಗಾಝಾದಲ್ಲಿನ ಯುದ್ಧದ ಕುರಿತು ಸಂಬಂಧಗಳು ಹದಗೆಟ್ಟಿರುವುದರಿಂದ ಐರ್ಲೆಂಡ್‍ನ ತನ್ನ ರಾಯಭಾರಿ ಕಚೇರಿಯನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಐರ್ಲೆಂಡ್‍ನ ತೀವ್ರ ಇಸ್ರೇಲಿ ವಿರೋಧಿ ನೀತಿಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ಸರಕಾರದ ಮೂಲಗಳು ಹೇಳಿವೆ. ನಾರ್ವೆ, ಸ್ಪೇನ್ ಮತ್ತು ಸ್ಲೊವೇನಿಯಾದ ಬಳಿಕ ಐರ್ಲೆಂಡ್ ಕೂಡಾ ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವುದಾಗಿ ಘೋಷಿಸಿದ ಬಳಿಕ ಮೇ ತಿಂಗಳಿನಲ್ಲಿ ಐರ್ಲೆಂಡ್‍ನಿಂದ ತನ್ನ ರಾಯಭಾರಿಯನ್ನು ಇಸ್ರೇಲ್ ಹಿಂದಕ್ಕೆ ಕರೆಸಿಕೊಂಡಿತ್ತು. ಈ ಮಧ್ಯೆ, ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ದಾಖಲಿಸಿರುವ ವ್ಯಾಜ್ಯದಲ್ಲಿ ಅಧಿಕೃತವಾಗಿ ಮಧ್ಯಪ್ರವೇಶಿಸಲು ನಿರ್ಧರಿಸಿದೆ.

ಇಸ್ರೇಲ್ ಜತೆಗಿನ ಸಂಬಂಧಗಳಲ್ಲಿನ ಎಲ್ಲಾ ಕೆಂಪು ಗೆರೆಗಳನ್ನು ಐರ್ಲೆಂಡ್ ದಾಟಿರುವುದರಿಂದ ರಾಯಭಾರಿ ಕಚೇರಿಯನ್ನು ಮುಚ್ಚಲಾಗುವುದು ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಹೇಳಿದ್ದಾರೆ. `ರಾಯಭಾರಿ ಕಚೇರಿಯನ್ನು ಮುಚ್ಚುವ ನಿರ್ಧಾರ ಅತ್ಯಂತ ವಿಷಾದನೀಯವಾಗಿದೆ. ಐರ್ಲೆಂಡ್ ಇಸ್ರೇಲ್ ವಿರೋಧಿ ಎಂಬ ಸಮರ್ಥನೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಐರ್ಲೆಂಡ್ ಶಾಂತಿಯ ಪರ, ಮಾನವ ಹಕ್ಕುಗಳ ಪರ ಮತ್ತು ಅಂತರಾಷ್ಟೀಯ ಕಾನೂನುಗಳ ಪರವಾಗಿದೆ' ಎಂದು ಐರ್ಲೆಂಡ್ ಪ್ರಧಾನಿ ಸೈಮನ್ ಹ್ಯಾರಿಸ್ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News