ಬಾಹ್ಯಾಕಾಶದಿಂದ ಭೂಮಿಯ ಧ್ರುವಗಳ ನೋಟ ಬಿಡುಗಡೆಗೊಳಿಸಿದ ಸ್ಪೇಸ್‍ಎಕ್ಸ್

Update: 2025-04-02 22:02 IST
ಬಾಹ್ಯಾಕಾಶದಿಂದ ಭೂಮಿಯ ಧ್ರುವಗಳ ನೋಟ ಬಿಡುಗಡೆಗೊಳಿಸಿದ ಸ್ಪೇಸ್‍ಎಕ್ಸ್
  • whatsapp icon

ನ್ಯೂಯಾರ್ಕ್: ಎಲಾನ್ ಮಸ್ಕ್ ಅವರ ಸ್ಪೇಸ್‍ಎಕ್ಸ್ `ಫ್ರಾಮ್2' ಯೋಜನೆಯ ಅಂಗವಾಗಿ ನಾಲ್ಕು ಖಾಸಗಿ ಗಗನಯಾತ್ರಿಗಳ ತಂಡವನ್ನು ಭೂಮಿಯ ಧ್ರುವದಿಂದ ಧ್ರುವಕ್ಕೆ ಪರಿಭ್ರಮಿಸಲು ಕಳುಹಿಸಿದ ನಂತರ, ಭೂಮಿಯ ಧ್ರುವೀಯ ಪ್ರದೇಶಗಳ ನೋಟವನ್ನು ತೋರಿಸುವ ವೀಡಿಯೊವನ್ನು `ಸ್ಪೇಸ್‍ಎಕ್ಸ್' ಬಿಡುಗಡೆಗೊಳಿಸಿದೆ.

ಸ್ಪೇಸ್‍ಎಕ್ಸ್ ಹಂಚಿಕೊಂಡಿರುವ ವೀಡಿಯೊವು ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ 90 ಡಿಗ್ರಿ ಓರೆಯಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಿವ ಸಂದರ್ಭದಲ್ಲಿ ಬಾಹ್ಯಾಕಾಶದಿಂದ ಭೂಮಿಯ ನೋಟವನ್ನು ತೋರಿಸುತ್ತದೆ. ವೀಡಿಯೊವನ್ನು ಹಂಚಿಕೊಂಡಿರುವ ಎಲಾನ್ ಮಸ್ಕ್ `ಮಾನವರು ಭೂಮಿಯ ಧ್ರುವಗಳ ಸುತ್ತಲೂ ಕಕ್ಷೆಯಲ್ಲಿರುವುದು ಇದೇ ಮೊದಲು' ಎಂದು ಕ್ಯಾಪ್ಷನ್ ಸೇರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News