ಫೆಲಸ್ತೀನ್ ವಿದೇಶಾಂಗ ಸಚಿವರ ಜತೆ ಜೈಶಂಕರ್ ಮಾತುಕತೆ
Update: 2024-02-18 17:03 GMT
ಮ್ಯೂನಿಚ್: ಜರ್ಮನಿಯಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಮ್ಯೂನಿಚ್ ಭದ್ರತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ರವಿವಾರ ಫೆಲಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್- ಮಲೀಕಿಯನ್ನು ಭೇಟಿಯಾಗಿ ಯುದ್ಧದಿಂದ ಜರ್ಝರಿತಗೊಂಡಿರುವ ಗಾಝಾದಲ್ಲಿನ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ಫೆಲೆಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಸೂತ್ರವೇ ಸೂಕ್ತ ಪರಿಹಾರ ಮಾರ್ಗವಾಗಿದೆ ಎಂದು ಭಾರತ ದೀರ್ಘಾವಧಿಯಿಂದ ಪ್ರತಿಪಾದಿಸುತ್ತಿದೆ. ಮ್ಯೂನಿಚ್ ಸಮಾವೇಶದ ಸಂದರ್ಭ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ `ಫೆಲೆಸ್ತೀನ್ ಸಮಸ್ಯೆಗೆ ದ್ವಿರಾಷ್ಟ್ರ ಸೂತ್ರವೇ ಸೂಕ್ತ ಪರಿಹಾರ ಎಂದು ಪ್ರತಿಪಾದಿಸುವ ದೇಶಗಳ ಸಂಖ್ಯೆ ಹೆಚ್ಚಿದೆ. ಆದರೆ ಇದೀಗ ಈ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ' ಎಂದರು.