ಲೆಬನಾನ್‍ಗೆ ನುಗ್ಗಿದ ಐಡಿಎಫ್ ಪಡೆ ತೀವ್ರ ಸಂಘರ್ಷ; 8 ಇಸ್ರೇಲ್ ಯೋಧರು ಮೃತ್ಯು
Update: 2024-10-02 17:08 GMT
ಬೈರುತ್ : ಬುಧವಾರ ಇಸ್ರೇಲ್‍ನ ಭದ್ರತಾ ಪಡೆ(ಐಡಿಎಫ್) ದಕ್ಷಿಣ ಲೆಬನಾನ್‍ನ ಒಳಪ್ರವೇಶಿಸಿ ಆಕ್ರಮಣ ನಡೆಸಿದ್ದು ಎರಡು ಪ್ರದೇಶಗಳಲ್ಲಿ ತೀವ್ರ ಸಂಘರ್ಷ ನಡೆದಿದೆ. ಇಸ್ರೇಲ್‍ನ 8 ಯೋಧರು ಮೃತಪಟ್ಟಿದ್ದಾರೆ ಎಂದು ಹಿಜ್ಬುಲ್ಲಾ ಮೂಲಗಳು ಹೇಳಿವೆ.
ಎರಡು ಕಡೆ ಗಡಿರೇಖೆಯನ್ನು ಇಸ್ರೇಲ್ ಪಡೆ ಉಲ್ಲಂಘಿಸಿ ಸುಮಾರು 400 ಮೀಟರ್ ಗಳಷ್ಟು ಒಳನುಗ್ಗಿದೆ. ನಮ್ಮ ಹೋರಾಟಗಾರರ ತೀವ್ರ ಪ್ರತಿರೋಧದ ಬಳಿಕ ಕೆಲ ಸಮಯದ ಬಳಿಕ ಹಿಂತಿರುಗಿದೆ. ಇಸ್ರೇಲ್‍ನ 8 ಯೋಧರು ಹತರಾಗಿದ್ದು 3 ಟ್ಯಾಂಕ್‍ಗಳನ್ನು ನಾಶಗೊಳಿಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.
8 ಯೋಧರು ಮೃತಪಟ್ಟಿರುವುದನ್ನು ಇಸ್ರೇಲ್ ಸೇನೆಯೂ ದೃಢಪಡಿಸಿದೆ. ಈ ಮಧ್ಯೆ, ಲೆಬನಾನ್ ಗಡಿಭಾಗದ ಹಳ್ಳಿಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಹಿಜ್ಬುಲ್ಲಾ ಕಾರ್ಯಕರ್ತರು ಹತರಾಗಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿದೆ.