ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಹಮಾಸ್ ಮುಖಂಡ ಮೃತ್ಯು

Update: 2024-09-30 16:48 GMT

PC : PTI

 ಗಾಝಾ: ದಕ್ಷಿಣ ಲೆಬನಾನ್‍ನಲ್ಲಿ ಸೋಮವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ಮುಖಂಡ ಫತಾಹ್ ಶರೀಫ್ ಅಬು-ಅಲ್‍ಅಮೀನ್ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಸಶಸ್ತ್ರ ಹೋರಾಟಗಾರರ ಗುಂಪು ಹೇಳಿದೆ.

ದಕ್ಷಿಣ ಲೆಬನಾನ್‍ಲ್ಲಿರುವ ಫೆಲೆಸ್ತೀನ್ ನಿರಾಶ್ರಿತರ ಶಿಬಿರದ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಶರೀಫ್, ಅವರ ಪತ್ನಿ, ಮಗ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಶರೀಫ್ `ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪೆಲೆಸ್ತೀನ್(ಪಿಎಫ್‍ಎಲ್‍ಪಿ)ಯ ಮುಖಂಡರಾಗಿದ್ದರು. ಪಿಎಫ್‍ಎಲ್‍ಪಿ ಲೆಬನಾನ್‍ನಲ್ಲಿ ಹಿಜ್ಬುಲ್ಲಾ ಗುಂಪಿನ ಪರವಾಗಿ ಹೋರಾಟ ನಡೆಸುತ್ತಿದೆ ಎಂದು ವರದಿಯಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News