ಲೆಬನಾನ್ |ಇಸ್ರೇಲ್ ದಾಳಿಯಲ್ಲಿ ಮೂವರು ಮೃತ್ಯು ; ವಿಶ್ವಸಂಸ್ಥೆ ಶಾಂತಿಪಾಲಕರಿಗೆ ಗಾಯ

Update: 2024-11-07 16:41 GMT

PC : PTI

ಬೈರೂತ್ : ದಕ್ಷಿಣ ಲೆಬನಾನ್‍ನ ಸಿಡಾನ್ ನಗರದಲ್ಲಿ ಸೇನೆಯ ಚೆಕ್‍ಪೋಸ್ಟ್ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಪ್ರಜೆಗಳು ಮೃತಪಟ್ಟಿದ್ದು ಲೆಬನಾನ್‍ನ ಮೂವರು ಯೋಧರು ಹಾಗೂ ವಿಶ್ವಸಂಸ್ಥೆ ಶಾಂತಿಪಾಲನಾ ತಂಡದಲ್ಲಿರುವ ಮಲೇಶ್ಯಾದ ನಾಲ್ವರು ಯೋಧರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಸಿಡಾನ್‍ನ ಅವಾಲಿ ಚೆಕ್‍ಪೋಸ್ಟ್ ಮೂಲಕ ಸಾಗುತ್ತಿದ್ದ ಕಾರೊಂದನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಜೆಗಳು ಸಾವನ್ನಪ್ಪಿದ್ದಾರೆ. ಚೆಕ್‍ಪೋಸ್ಟ್ ನ ಲ್ಲಿ ಕರ್ತವ್ಯದಲ್ಲಿದ್ದ ಲೆಬನಾನ್‍ ನ ಮೂವರು ಯೋಧರು ಹಾಗೂ ಶಾಂತಿಪಾಲನಾ ತಂಡದ 4 ಯೋಧರು ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News