ಲಂಡನ್: ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ಢಿಕ್ಕಿ

Update: 2024-04-06 16:15 GMT

Photo: NDTV 

ಲಂಡನ್: ಲಂಡನ್‍ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ಢಿಕ್ಕಿಯಾಗಿದ್ದು ಎರಡೂ ವಿಮಾನಗಳು ಸ್ವಲ್ಪ ಪ್ರಮಾಣದಲ್ಲಿ ಹಾನಿಗೊಂಡಿವೆ ಎಂದು ವರದಿಯಾಗಿದೆ.

ವರ್ಜಿನ್ ಅಟ್ಲಾಂಟಿಕ್ ಬೋಯಿಂಗ್ 787 ವಿಮಾನ ಮತ್ತು ಬ್ರಿಟಿಷ್ ಏರ್‍ವೇಸ್ ಎ350 ವಿಮಾನಗಳು ನಿಲ್ದಾಣದಲ್ಲಿ ಡಿಕ್ಕಿಯಾಗಿದೆ. ವರ್ಜಿನ್ ಬೋಯಿಂಗ್ ಅನ್ನು ಟಗ್ ಮೂಲಕ ನಿರ್ದೇಶಿಸುತ್ತಿದ್ದಾಗ ವಿಮಾನದ ರೆಕ್ಕೆಯು ಹತ್ತಿರದಲ್ಲಿದ್ದ ಬ್ರಿಟಿಷ್ ಏರ್‍ವೇಸ್ ವಿಮಾನದ ಬಾಲಕ್ಕೆ ಢಿಕ್ಕಿಯಾಗಿದೆ. ಅಪಘಾತದ ಬಳಿಕ ತುರ್ತು ಸೇವಾಪಡೆ ಸ್ಥಳಕ್ಕೆ ಧಾವಿಸಿದೆ ಎಂದು `ಡೈಲಿ ಮಿರರ್' ವರದಿ ಮಾಡಿದೆ.

ಅಪಘಾತದ ಸಂದರ್ಭ ಎರಡೂ ವಿಮಾನ ನಿಲ್ದಾಣಗಳಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ವಿಮಾನ ನಿಲ್ದಾಣದ ಕಾರ್ಯನಿರ್ವಹಣೆಗೆ ಇದರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News