ಜಪಾನ್ ನಲ್ಲಿ 7.1 ತೀವ್ರತೆಯ ಭೂಕಂಪನ: ಸುನಾಮಿ ಮುನ್ನೆಚ್ಚರಿಕೆ

Update: 2024-08-08 09:44 GMT

ಟೋಕಿಯೊ: ಗುರುವಾರ ಜಪಾನ್ ನಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 7.1 ಎಂದು ದಾಖಲಾಗಿದೆ. ಭೂಕಂಪನ ಕೇಂದ್ರವು ದಕ್ಷಿಣ ಜಪಾನ್ ಆಗಿತ್ತು ಎಂದು ಹೇಳಲಾಗಿದೆ. ಭೂಕಂಪನ ಕೇಂದ್ರ ಸ್ಥಾನವು ನಿಚಿಯಾನ್ ನಿಂದ 20 ಕಿಮೀ ದೂರದಲ್ಲಿ, 25 ಕಿಮೀ ಆಳದಲ್ಲಿತ್ತು ಎನ್ನಲಾಗಿದೆ. ಇದರ ಬೆನ್ನಿಗೇ ಅಧಿಕಾರಿಗಳು ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಜಪಾನ್ ನ ಭೂಕಂಪನ ನಿಗಾ ಸಂಸ್ಥೆ NERV ಪ್ರಕಾರ, ಹ್ಯೂಗಾ-ನಾಡಾ ಸಮುದ್ರದಲ್ಲಿ ಭೂಕಂಪನ ವರದಿಯಾಗಿದೆ. ಭೂಕಂಪನದ ನಂತರ ಒಂದು ಮೀಟರ್ ಎತ್ತರದ ಅಲೆಗಳನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರಾವಳಿ ಪ್ರದೇಶಗಳು, ನದಿ ತೀರಗಳು ಅಥವಾ ಕೆರೆಗಳ ಬಳಿ ವಾಸಿಸುತ್ತಿರುವವರಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News