ಫೆಲಸ್ತೀನ್ ಬೆಂಬಲಿಸಿ ಬ್ರಿಟನ್ ನಗರಗಳಲ್ಲಿ ಬೃಹತ್ ರ‍್ಯಾಲಿ

Update: 2023-10-15 03:49 GMT

Photo: twitter.com/FriendsofAlAqsa

ಲಂಡನ್: ಹಮಾಸ್ ಗೆ ಬೆಂಬಲ ಸೂಚಿಸುವ ಪ್ರತಿಯೊಬ್ಬರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರೂ, ಲಂಡನ್ ಹಾಗೂ ಬ್ರಿಟನ್ ನ ವಿವಿಧ ನಗರಗಳಲ್ಲಿ ಶನಿವಾರ ಸಾವಿರಾರು ಮಂದಿ ಫೆಲಸ್ತೀನ್ ಪರ ರ‍್ಯಾಲಿ ನಡೆಸಿದರು.

ಬ್ರಿಟನ್ ರಾಜಧಾನಿಯ ಹೃದಯ ಭಾಗದಲ್ಲಿ ಮತ್ತು ಉತ್ತರ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ಬೃಹತ್ ಪಾದಯಾತ್ರೆ ಕೈಗೊಂಡ ಬೆಂಬಲಿಗರು, ಪೊಲೀಸ್ ಬಿಗಿಭದ್ರತೆಯ ನಡುವೆಯೇ ಸ್ಕಾಟ್ಲೆಂಡ್ ನ ಎಡಿನ್ ಬರ್ಗ್ ಹಾಗೂ ಇತರ ಹಲವು ನಗರಗಳಲ್ಲಿ ಕೂಡಾ ಮೆರವಣಿಗೆ ನಡೆಸಿದರು.

ಲಂಡನ್ ನಲ್ಲಿ ಬಿಬಿಸಿ ನ್ಯೂಸ್ ಕೇಂದ್ರ ಕಚೇರಿ ಬಳಿ ಇರುವ ಪ್ರಧಾನಿ ರಿಷಿ ಸುನಕ್ ಅವರ ಡೌನಿಂಗ್ ಸ್ಟ್ರೀಟ್ ಕಚೇರಿ ಬಳಿ ಸಮಾವೇಶಗೊಂಡ ಬಳಿಕ ಪಾದಯಾತ್ರೆ ಆರಂಭಿಸಿದರು. ಕೆಲ ಮಂದಿ ಪ್ರತಿಭಟನಾಕಾರರು ಫೆಲಸ್ತೀನ್ ಧ್ವಜ ಮತ್ತು ಫಲಕಗಳನ್ನು ಹಿಡಿದಿದ್ದರು. ಜತೆಗೆ ಫೆಲಸ್ತೀನ್ ಸ್ವಾತಂತ್ರ್ಯಕ್ಕಾಗಿ, ಹತ್ಯಾಕಾಂಡ ಕೊನೆಗೊಳಿಸಿ ಮತ್ತು ಇಸ್ರೇಲ್ ಗೆ ನಿರ್ಬಂಧ ವಿಧಿಸಿ ಎಂಬ ಘೋಷಣೆಗಳನ್ನು ಕೂಗಿದರು. 

ಈ ದಾಳಿ ಕೊನೆಗೊಳ್ಳಬೇಕು ಎಂಬ ಆಗ್ರಹ ಬ್ರಿಟನ್ ಮಾತ್ರವಲ್ಲ ಇಡೀ ವಿಶ್ವದಿಂದ ಕೇಳಿ ಬರಬೇಕು ಎಂದು ಫ್ರೆಂಡ್ಸ್ ಆಫ್ ಅಲ್-ಅಕ್ಸಾ ಅಭಿಯಾನದ ಅಧ್ಯಕ್ಷ ಇಸ್ಮಾಯಿಲ್ ಪಟೇಲ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News