ಕೋಲ್ಕತಾದಲ್ಲಿ ಬಾಂಗ್ಲಾ ಸಂಸದನ ಹತ್ಯೆ |ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಿದ ನೇಪಾಳ
Update: 2024-06-07 22:08 IST

ಅನ್ವರುಲ್ ಅಝೀಮ್ | PC : PTI
ಕಠ್ಮಂಡು : ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಮ್ ಅನಾರ್‍ರನ್ನು ಕೋಲ್ಕತಾದಲ್ಲಿ ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನನ್ನು ನೇಪಾಳವು ಭಾರತಕ್ಕೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.
ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಬಾಂಗ್ಲಾದ ಪ್ರಜೆ ಮುಹಮ್ಮದ್ ಸಿಯಾಮ್ ಹುಸೇನ್‍ನನ್ನು ನೇಪಾಳದ ಇಂಟರ್‍ಪೋಲ್ ಶಾಖೆಯ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಈತ ಹತ್ಯೆ ನಡೆದ ಬಳಿಕ ನೇಪಾಳಕ್ಕೆ ಪರಾರಿಯಾಗಿದ್ದು ನೇಪಾಳದ ಗಡಿಭಾಗದ ಗ್ರಾಮದಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.