ಕೆನಡಾ | ಖಾಲಿಸ್ತಾನ್ ಗುಂಪಿನಲ್ಲಿದ್ದ ಪೊಲೀಸ್ ಅಧಿಕಾರಿಗೆ ಕ್ಲೀನ್‍ಚಿಟ್

Update: 2024-11-15 16:53 GMT

PC : PTI

ಒಟ್ಟಾವ : ನವೆಂಬರ್ 3ರಂದು ಬ್ರಾಂಪ್ಟನ್‍ನ ಹಿಂದು ದೇವಸ್ಥಾನದಲ್ಲಿ ಭಕ್ತರ ಮೇಲೆ ದಾಳಿ ನಡೆಸಿದ್ದ ಖಾಲಿಸ್ತಾನ್ ಪ್ರತಿಭಟನಾಕಾರರ ಗುಂಪು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿಗೆ ಕ್ಲೀನ್‍ಚಿಟ್ ನೀಡಿ ದೋಷಮುಕ್ತಗೊಳಿಸಲಾಗಿದೆ.

ಪೊಲೀಸ್ ಅಧಿಕಾರಿ ಹರೀಂದರ್ ಸೋಹಿ ಪ್ರತಿಭಟನಾಕಾರರ ಜತೆಗಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. `ಆದರೆ ಹರೀಂದರ್ ಸೋಹಿ ಶಸ್ತ್ರಾಸ್ತ್ರ ಕೆಳಗಿಡುವಂತೆ ಅಲ್ಲಿ ಸೇರಿದ್ದವರ ಮನ ಒಲಿಸಲು ಪ್ರಯತ್ನಿಸುತ್ತಿರುವುದು ತನಿಖೆಯಿಂದ ದೃಢಪಟ್ಟಿದೆ. ಅಲ್ಲದೆ ಆಗ ಅವರು ಪೊಲೀಸ್ ಸಮವಸ್ತ್ರದಲ್ಲಿ ಇರಲಿಲ್ಲ' ಎಂದು ಹೇಳಿರುವ ಕೆನಡಾದ ಪೀಲ್ ಪ್ರಾಂತದ ಪೊಲೀಸ್ ಇಲಾಖೆ ಅವರನ್ನು ದೋಷಮುಕ್ತಗೊಳಿಸಿದೆ.

ದೇವಸ್ಥಾನದ ಎದುರು ನಡೆದ ಪ್ರತಿಭಟನೆಯ ಸಂದರ್ಭ ಖಾಲಿಸ್ತಾನ್ ಧ್ವಜ ಹಿಡಿದಿದ್ದ ಸೋಹಿ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News