ಇಸ್ರೇಲ್ ಜತೆಗಿನ ರಾಜತಾಂತ್ರಿಕ ಸಂಬಂಧ ಮುರಿದುಕೊಂಡ ನಿಕರಾಗುವ
Update: 2024-10-12 16:33 GMT
ಮನಾಗುವ : ಇಸ್ರೇಲ್‍ನೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿಯುತ್ತಿರುವುದಾಗಿ ನಿಕರಾಗುವ ಹೇಳಿದ್ದು ಇಸ್ರೇಲ್ ಸರಕಾರ ನರಹಂತಕ ಮತ್ತು ಫ್ಯಾಸಿಸ್ಟ್ ಎಂದು ಆರೋಪಿಸಿದೆ.
ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಇಸ್ರೇಲ್‍ನ ದಾಳಿಯ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವುದಾಗಿ ನಿಕರಾಗುವ ಸರಕಾರ ಹೇಳಿದೆ. ಇದಕ್ಕೂ ಮುನ್ನ, ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವಂತೆ ಸರಕಾರವನ್ನು ಕೋರುವ ನಿರ್ಣಯವನ್ನು ದೇಶದ ಸಂಸತ್ ಅನುಮೋದಿಸಿತ್ತು. ಗಾಝಾದ ಸಂಘರ್ಷ ಈಗ ಲೆಬನಾನ್‍ಗೂ ವಿಸ್ತರಿಸಿದೆ ಮತ್ತು ಸಿರಿಯಾ, ಯೆಮನ್ ಮತ್ತು ಇರಾನ್‍ಗೂ ಬೆದರಿಕೆ ಒಡ್ಡುತ್ತಿದೆ ಎಂದು ನಿಕರಾಗುವ ಸರಕಾರ ಹೇಳಿದೆ.