ಸಿಯೋಲ್ ನತ್ತ ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿದ ಉತ್ತರ ಕೊರಿಯಾ
ಸಿಯೋಲ್ : ದಕ್ಷಿಣ ಕೊರಿಯಾವನ್ನು ಶಿಕ್ಷಿಸಲು ಬುಧವಾರ ಕಸತುಂಬಿದ ನೂರಾರು ಬಲೂನುಗಳನ್ನು ಗಡಿಯುದ್ದಕ್ಕೂ ಕಳುಹಿಸಿದ ಬಳಿಕ ಉತ್ತರ ಕೊರಿಯಾವು ಗುರುವಾರ ಬೆಳಿಗ್ಗೆ ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಉತ್ತರ ಕೊರಿಯಾವು ಬುಧವಾರ ಪ್ರಾಣಿಗಳ ಮಲ ತುಂಬಿದ ಬಲೂನುಗಳನ್ನು ದಕ್ಷಿಣ ಕೊರಿಯಾ ಪ್ರದೇಶಕ್ಕೆ ಹಾರಿಬಿಟ್ಟಿತ್ತು. ಕಾರ್ಯಕರ್ತರು ನಡೆಸುತ್ತಿರುವ ಕಿಮ್ ವಿರೋಧಿ ಅಭಿಯಾನಕ್ಕೆ ತಮ್ಮ ದೇಶ ನಡೆಸಿದ ಸಮರ್ಥನೀಯ ಪ್ರತೀಕಾರದ ಕ್ರಮ ಇದಾಗಿದೆ ಮತ್ತು ದಕ್ಷಿಣ ಕೊರಿಯಾಕ್ಕೆ `ಪ್ರಾಮಾಣಿಕ ಉಡುಗೊರೆಗಳು' ಎಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ಜಾಂಗ್ ಅವರ ಉತ್ತರಾಧಿಕಾರಿ ಎಂದು ಕರೆಯಲಾಗುವ ಸಹೋದರಿ ಕಿಮ್ ಯೋ ಜೋಂಗ್ ಬಣ್ಣಿಸಿದ್ದಾರೆ.
ಗುರುವಾರ ಬೆಳಿಗ್ಗೆ ಸುಮಾರು 10 ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಕೊರಿಯಾ ಪರ್ಯಾಯ ದ್ವೀಪದ ಪೂರ್ವದ ಸಮುದ್ರಕ್ಕೆ ಪ್ರಯೋಗಿಸಲಾಗಿದೆ. ಇವು ಸುಮಾರು 350 ಕಿ.ಮೀ ದೂರ ಸಾಗಿವೆ ಎಂದು ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಹೇಳಿದ್ದಾರೆ. ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರಯೋಗಿಸಿರುವುದನ್ನು ಜಪಾನ್ ಕೂಡಾ ದೃಢಪಡಿಸಿದ್ದು ಕ್ಷಿಪಣಿಗಳು ಜಪಾನ್ನ ವಿಶೇಷ ಆರ್ಥಿಕ ವಲಯದ ಹೊರಪ್ರದೇಶಕ್ಕೆ ಅಪ್ಪಳಿಸಿರುವ ಸಾಧ್ಯತೆಯಿದೆ ಎಂದಿದೆ.