ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ತೈಲ ಬೆಲೆ ಏರಿಕೆ

Update: 2024-10-04 17:53 GMT

ಸಾಂದರ್ಭಿಕ ಚಿತ್ರ

ಲಂಡನ್ : ಮಧ್ಯ ಪ್ರಾಚ್ಯ ಸಂಘರ್ಷ ಉಲ್ಬಣಗೊಂಡರೆ ಜಾಗತಿತ ಮಾರುಕಟ್ಟೆಗೆ ತೈಲ ಪೂರೈಕೆಗೆ ಅಡ್ಡಿಯಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ತೈಲ ದರಗಳು ಮತ್ತಷ್ಟು ಏರಿಕೆಯಾಗಿವೆ.

ಬ್ರೆಂಟ್ ಕ್ರೂಡ್ ಫ್ಯೂಚರ್ಸ್ನಲ ಕಚ್ಛಾತೈಲದ ಬೆಲೆ ಬ್ಯಾರೆಲ್ಗೆಟ 0.7%ದಷ್ಟು ಏರಿಕೆಯಾಗಿದ್ದು ಬ್ಯಾರೆಲ್ಗೆಿ 78.17 ಡಾಲರ್ ಗೆ ತಲುಪಿದೆ. ಮಂಗಳವಾರ ಇಸ್ರೇಲ್ ಮೇಲೆ ರಾಕೆಟ್ ದಾಳಿಯ ಮೂಲಕ ಇರಾನ್ ತನ್ನ `ಮುಖ ಉಳಿಸಿಕೊಂಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಇರಾನ್ನ ತೈಲ ನೆಲೆಗಳನ್ನು ಇಸ್ರೇಲ್ ಗುರಿಯಾಗಿಸಬಹುದು ಮತ್ತು ಇದು ನೆರೆಯ ರಾಜ್ಯಗಳನ್ನೂ ಸಂಘರ್ಷಕ್ಕೆ ಎಳೆಯಬಹುದು ಎಂಬ ಭೀತಿ ಹೆಚ್ಚಿದೆ.

ಇಸ್ರೇಲ್ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್ನ ತೈಲ ಘಟಕಗಳ ಮೇಲೆ ಇಸ್ರೇಲ್ ನಡೆಸಬಹುದಾದ ಪ್ರತಿದಾಳಿಯನ್ನು ಬೆಂಬಲಿಸುವ ಬಗ್ಗೆ ಅಮೆರಿಕ ಚರ್ಚೆ ನಡೆಸುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದರು. ಈ ಹೇಳಿಕೆಯ ಬಳಿಕ ಗುರುವಾರ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ 5% ಏರಿಕೆಯಾಗಿತ್ತು. ಗುರುವಾರ ಬೈರುತ್ ಮೇಲೆ ಇಸ್ರೇಲ್ ಮಿಲಿಟರಿ ತೀವ್ರ ಕ್ಷಿಪಣಿ ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News