ಮೊದಲ ಎಂಫಾಕ್ಸ್ ರೋಗನಿರ್ಣಯ ಪರೀಕ್ಷೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ
ಜಿನೆವಾ : ತೀವ್ರಗತಿಯಲ್ಲಿ ಹರಡುತ್ತಿರುವ ಎಂಫಾಕ್ಸ್ಗಾೆಗಿ ಮೊದಲ ರೋಗ ನಿರ್ಣಯ ಪರೀಕ್ಷೆಯ ಬಳಕೆಯನ್ನು ಅನುಮೋದಿಸಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಹೇಳಿದೆ.
ಆಫ್ರಿಕಾದಾದ್ಯಂತ 800ಕ್ಕೂ ಹೆಚ್ಚು ಜನರು ಎಂಫಾಕ್ಸ್ ನಿಂದ ಸಾವನ್ನಪ್ಪಿದ್ದು ಅಲ್ಲಿ 16 ದೇಶಗಳಲ್ಲಿ ಈ ರೋಗವು ಅಧಿಕೃತವಾಗಿ ಪತ್ತೆಯಾಗಿದೆ ಎಂದು ಆಫ್ರಿಕನ್ ಒಕ್ಕೂಟದ ರೋಗ ನಿಯಂತ್ರಣ ಕೇಂದ್ರ ತಿಳಿಸಿದೆ. ಪರೀಕ್ಷೆಯ ತುರ್ತು ಬಳಕೆಗೆ ಅನುಮೋದನೆ ಎಂಫಾಕ್ಸ್ ಏಕಾಏಕಿ ಹರಡುತ್ತಿರುವ ದೇಶಗಳಲ್ಲಿ ರೋಗ ನಿರ್ಣಯದ ಸಾಮಥ್ರ್ಯವನ್ನು ವಿಸ್ತರಿಸುವಲ್ಲಿ ಪ್ರಮುಖವಾಗಿದೆ. ಅಲ್ಲಿ ತ್ವರಿತ ಮತ್ತು ನಿಖರವಾದ ರೋಗ ಪರೀಕ್ಷೆಯ ಅಗತ್ಯ ತೀವ್ರವಾಗಿ ಹೆಚ್ಚುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
`ಎಲಿನಿಟಿ ಎಂ ಎಂಪಿಎಕ್ಸ್ವಿು ಎಂದು ಕರೆಯಲಾಗುವ ಪರೀಕ್ಷೆಯು ಮಾನವ ಗಾಯಗಳಿಂದ ಹೊರತೆಗೆದ ಮಾದರಿಯ ಪರೀಕ್ಷೆಯನ್ನು ಆಧರಿಸಿ ಎಂಫಾಕ್ಸ್ ಅನ್ನು ಪತ್ತೆಹಚ್ಚಲು ಶಕ್ತಗೊಳಿಸುತ್ತದೆ. ಮಾದರಿಗಳಿಂದ ಡಿಎನ್ಎಕಗಳನ್ನು ಪತ್ತೆಹಚ್ಚುವ ಮೂಲಕ ಪ್ರಯೋಗಾಲಯ ಮತ್ತು ಆರೋಗ್ಯ ಕಾರ್ಯಕರ್ತರು ಶಂಕಿತ ಎಂಫಾಕ್ಸ್ ಪ್ರಕರಣಗಳನ್ನು ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ದೃಢೀಕರಿಸಬಹುದು. ಸೀಮಿತ ಪರೀಕ್ಷಾ ಸಾಮಥ್ರ್ಯ ಮತ್ತು ಆಫ್ರಿಕಾದಲ್ಲಿ ಎಂಫಾಕ್ಸ್ ಪ್ರಕರಣಗಳನ್ನು ದೃಢೀಕರಿಸುವಲ್ಲಿ ವಿಳಂಬಗಳು ವೈರಸ್ನ್ ನಿರಂತರ ಹರಡುವಿಕೆಗೆ ಕೊಡುಗೆ ನೀಡುತ್ತದೆ. ಗುಣಮಟ್ಟದ ಖಾತ್ರಿಪಡಿಸಿದ ವೈದ್ಯಕೀಯ ಉತ್ಪನ್ನಗಳ ಲಭ್ಯತೆಯನ್ನು ಹೆಚ್ಚಿಸುವುದು ವೈರಸ್ ಹರಡುವುದನ್ನು ತಡೆಗಟ್ಟಲು ಮತ್ತು ತಮ್ಮ ಜನರನ್ನು ರಕ್ಷಿಸಲು ದೇಶಗಳಿಗೆ ಸಹಾಯ ಮಾಡುವ ನಮ್ಮ ಪ್ರಯತ್ನಗಳಿಗೆ ಪೂರಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ಮಹಾನಿರ್ದೇಶಕ ಯುಕಿಕೊ ನಕತನಿ ಹೇಳಿದ್ದಾರೆ.
ಈ ಹಿಂದೆ ಮಂಕಿಫಾಕ್ಸ್ ಎಂದು ಕರೆಯಲಾಗುವ ಎಂಫಾಕ್ಸ್ ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್ನಿಂ ದ ಉಂಟಾಗುತ್ತದೆ. ನಿಕಟ ದೈಹಿಕ ಸಂಪರ್ಕದಿಂದಲೂ ಹರಡುತ್ತದೆ.