ದಕ್ಷಿಣ ಆಫ್ರಿಕಾದಲ್ಲಿ ಎಂಫಾಕ್ಸ್ ಸೋಂಕು ಉಲ್ಬಣ : ಒಬ್ಬ ಮೃತ್ಯು

Update: 2024-06-12 17:11 GMT

ಸಾಂದರ್ಭಿಕ ಚಿತ್ರ 

ಜೊಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಎಂಫಾಕ್ಸ್(ಮಂಕಿಫಾಕ್ಸ್) ಸೋಂಕಿನ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು ಓರ್ವ ಮೃತಪಟ್ಟಿದ್ದಾರೆ. ಇತರ ನಾಲ್ಕು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಸರಕಾರ ಬುಧವಾರ ಹೇಳಿದೆ.

2022ರ ಬಳಿಕ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಎಂಫಾಕ್ಸ್ ಸೋಂಕಿನ 5 ಪ್ರಕರಣ ಮೇ 8 ಮತ್ತು ಜೂನ್ 7ರ ನಡುವಿನ ಅವಧಿಯಲ್ಲಿ ವರದಿಯಾಗಿದೆ. ಈ ರೋಗದಿಂದ ಈಗ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಶಂಕಿತ ರೋಗಲಕ್ಷಣ ಉಳ್ಳವರು ವೈದ್ಯಕೀಯ ನೆರವು ಪಡೆಯಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಹೆಚ್ಚಿನ ಚಿಕಿತ್ಸಾ ಔಷಧಿಗಳನ್ನು ಪಡೆಯಲು ಪ್ರಯತ್ನಿಸಲಾಗುವುದು ಎಂದು ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಜೋ ಫಹಾಲ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಹಿಂದೆ ಮಂಕಿಫಾಕ್ಸ್ ಎಂದು ಕರೆಯಲಾಗುತ್ತಿದ್ದ ಎಂಫಾಕ್ಸ್, ಸೋಂಕಿತ ಮಾನವರು ಅಥವಾ ಪ್ರಾಣಿಗಳ ನಿಕಟ ಸಂಪರ್ಕದ ಮೂಲಕ ಮತ್ತು ಕಲುಷಿತ ವಸ್ತುಗಳ ಮೂಲಕ ಹರಡುವ ವೈರಲ್ ಕಾಯಿಲೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News