ಈಜಿಪ್ಟ್ ನ ಸೂಯೆಜ್ ಕಾಲುವೆ ಮೂಲಕ ಹಾದು ಹೋದ ಇಸ್ರೇಲ್ ಯುದ್ಧ ನೌಕೆ!: ಆಕ್ರೋಶಕ್ಕೆ ಗುರಿ
ಹೊಸದಿಲ್ಲಿ: ಈಜಿಪ್ಟ್ ನ ಸೂಯೆಜ್ ಕಾಲುವೆ ಮೂಲಕ ಇಸ್ರೇಲ್ ಯುದ್ಧ ನೌಕೆ ಹಾದು ಹೋಗುತ್ತಿರುವುದನ್ನು ತೋರಿಸುವ ವೀಡಿಯೋ ವೈರಲ್ ಬೆನ್ನಲ್ಲಿ ಇಸ್ರೇಲ್ ಮಿಲಿಟರಿಗೆ ಈಜಿಪ್ಟ್ ಸಹಾಯ ಮಾಡುತ್ತಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಕಂಡು ಬಂದ ಯುದ್ಧ ನೌಕೆಯನ್ನು ʼSa'ar 6-class corvetteʼ ಎಂದು ಗುರುತಿಸಲಾಗಿದೆ. ಈ ಯುದ್ಧ ನೌಕೆ ಜರ್ಮನ್ ನಿರ್ಮಿತವಾಗಿದೆ. ಇದನ್ನು 2015ರಲ್ಲಿ ಇಸ್ರೇಲ್ ನೌಕಾಪಡೆ ಖರೀದಿಸಿತ್ತು. AL JAZEERA ಹಂಚಿಕೊಂಡ ವಿಡಿಯೋದಲ್ಲಿ ಯುದ್ಧ ನೌಕೆಯಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಧ್ವಜ ಇರುವುದು ಕಂಡು ಬಂದಿದೆ.
ಇದನ್ನು ಗಾಝಾ ಮೇಲಿನ ದಾಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ. ಈಜಿಪ್ಟ್ ಜಲ ಮಾರ್ಗದ ಮೂಲಕ ಇಸ್ರೇಲ್ ಸ್ಪೋಟಕಗಳನ್ನು ಸಾಗಾಣೆ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳ ನಂತರ ಈಜಿಪ್ಟ್ ಸೇನೆಯು ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಗಳಿಗೆ ಸಹಾಯ ಕುರಿತ ಆರೋಪವನ್ನು ಅಲ್ಲಗೆಳೆದಿದೆ. ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಎಲ್ಲಾ ರೀತಿಯ ಹಡಗುಗಳ ಸಂಚಾರಕ್ಕೆ ಅನುಮತಿಯಿದೆ ಎಂದು ಹೇಳಿಕೊಂಡಿದೆ.