ಪಾಕಿಸ್ತಾನ | ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 11 ಯೋಧರು ಮೃತ್ಯು

Update: 2024-11-20 17:02 GMT

  ಸಾಂದರ್ಭಿಕ ಚಿತ್ರ

ಕರಾಚಿ : ಪಾಕಿಸ್ತಾನದ ವಾಯವ್ಯ ಪ್ರಾಂತದಲ್ಲಿ ಚೆಕ್‍ಪೋಸ್ಟ್ ಬಳಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 11 ಯೋಧರು ಸೇರಿದಂತೆ 12 ಮಂದಿ ಮೃತಪಟ್ಟಿದ್ದು ಇತರ 7 ಮಂದಿ ಗಾಯಗೊಂಡಿರುವುದಾಗಿ ಭದ್ರತಾ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾ ಪ್ರಾಂತದ ಬನ್ನು ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಆತ್ಮಹತ್ಯಾ ಬಾಂಬರ್ ಭದ್ರತಾ ಚೆಕ್‍ಪೋಸ್ಟ್‍ಗೆ ಸ್ಫೋಟಕ ತುಂಬಿದ್ದ ವಾಹನವನ್ನು ಅಪ್ಪಳಿಸಿದಾಗ ನಡೆದ ಸ್ಫೋಟದಲ್ಲಿ ದಾಳಿಕೋರ ಹಾಗೂ 11 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಭಯೋತ್ಪಾದಕ ಸಂಘಟನೆ ಪಾಕಿಸ್ತಾನ್ ತಾಲಿಬಾನ್‍ನಿಂದ ಪ್ರತ್ಯೇಕಗೊಂಡಿರುವ ಹಫೀಝ್ ಗುಲ್ ಬಹಾದೂರ್ ಗುಂಪು ದಾಳಿಯ ಹೊಣೆಯನ್ನು ವಹಿಸಿಕೊಂಡಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News