ಪೇಷಾವರ: ಬಾಂಬ್ ಸ್ಫೋಟ

Update: 2023-09-11 16:49 GMT

Screen grab from video twitter//@Rizwan_2Ahmad

ಲಾಹೋರ್: ಪೇಷಾವರದ ಬಳಿ ಅರೆಸೇನಾ ಪಡೆಯ ಸಿಬಂದಿಗಳು ಪ್ರಯಾಣಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ನಡೆದ ಬಾಂಬ್ದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು ಇಬ್ಬರು ನಾಗರಿಕರ ಸಹಿತ 8 ಮಂದಿ ಗಾಯಗೊಂಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಖೈಬರ್ ಪಖ್ತೂಂಕ್ವ ವಿಭಾಗದ ಅರೆಸೇನಾ ಪಡೆಯ ಸಿಬಂದಿಗಳಿದ್ದ ವಾಹನ ಪೇಷಾವರದತ್ತ ಪ್ರಯಾಣಿಸುತ್ತಿತ್ತು. ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ಸ್ಫೋಟ ನಡೆಸಿದ್ದು ವಾಹನ ಸಂಪೂರ್ಣ ಹಾನಿಗೊಳಗಾಗಿದೆ.

ಅರೆಸೇನಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದು 8 ಮಂದಿ ಗಾಯಗೊಂಡಿದ್ದಾರೆ. ಬಾಂಬ್ ನಿಷ್ಕ್ರಿಯ ದಳದ ತಜ್ಞರು ಸ್ಥಳಕ್ಕೆ ಧಾವಿಸಿದ್ದು ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News