ಓಹಿಯೊ ಬಳಿ ವಿಮಾನ ಅಪಘಾತ | 3 ಮಂದಿ ಮೃತ್ಯು

Update: 2024-07-21 16:45 GMT

Photo: ANI Twitter

ನ್ಯೂಯಾರ್ಕ್ : ಈಶಾನ್ಯ ಓಹಿಯೋದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಷಕ್ಕೆ ಪ್ರಯತ್ನಿಸಿದ ವಿಮಾನವೊಂದು ಅಪಘಾತಕ್ಕೆ ಒಳಗಾಗಿದ್ದು ವಿಮಾನದಲ್ಲಿದ್ದ ಮೂವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಓಹಿಯೋದ ಯಂಗ್ಸ್ಟೌನ್- ವಾರೆನ್ ಪ್ರಾದೇಶಿಕ ವಿಮಾನ ನಿಲ್ದಾಣದ ಬಳಿ ಅವಳಿ ಇಂಜಿನ್ ವಿಮಾನ ಪತನಗೊಂಡಿದ್ದು ವಿಮಾನದ ಪೈಲಟ್ ಮತ್ತು ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದಾರೆ. ವಿಮಾನವು ನಿಲ್ದಾಣದ `ಏರ್ ರಿಸರ್ವ್ ಸ್ಟೇಷನ್'ಗೆ ಸಂಬಂಧಿಸಿಲ್ಲ ಮತ್ತು ಇಂಜಿನ್ನಲ್ಲಿ ತಾಂತ್ರಿಕ ದೋಷದ ಕಾರಣ ಅನಿಗದಿತ ತುರ್ತು ಭೂಸ್ಪರ್ಷಕ್ಕೆ ಪ್ರಯತ್ನಿಸಿರುವ ಸಾಧ್ಯತೆಯಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News