ಫ್ಲೋರಿಡ: ಹೆದ್ದಾರಿಗೆ ಪತನಗೊಂಡ ಲಘು ವಿಮಾನ; 3 ಮಂದಿ ಮೃತ್ಯು

Update: 2025-04-12 22:13 IST
ಫ್ಲೋರಿಡ: ಹೆದ್ದಾರಿಗೆ ಪತನಗೊಂಡ ಲಘು ವಿಮಾನ; 3 ಮಂದಿ ಮೃತ್ಯು

Photo: X/@krassenstein

  • whatsapp icon

ನ್ಯೂಯಾರ್ಕ್: ದಕ್ಷಿಣ ಫ್ಲೋರಿಡಾ ವಿಮಾನ ನಿಲ್ದಾಣದ ಬಳಿ ಲಘು ವಿಮಾನವೊಂದು ಅಂತರರಾಜ್ಯ ಹೆದ್ದಾರಿಗೆ ಪತನಗೊಂಡು ಮೂವರು ಸಾವನ್ನಪ್ಪಿದ್ದು ಒಬ್ಬ ಗಾಯಗೊಂಡ ಘಟನೆ ವರದಿಯಾಗಿದೆ.

ದಕ್ಷಿಣ ಫ್ಲೋರಿಡಾದ ಬೊಕ ರೇಟನ್ ವಿಮಾನ ನಿಲ್ದಾಣದ ಬಳಿ ದುರಂತ ಸಂಭವಿಸಿದ್ದು ಹೆದ್ದಾರಿಗೆ ಪತನಗೊಂಡ ವಿಮಾನವು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರೊಂದನ್ನು ಪಕ್ಕದ ರೈಲ್ವೇ ಹಳಿಗೆ ನೂಕಿದೆ. ಕಾರಿನಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದು ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನದಲ್ಲಿದ್ದ ಮೂವರು ಸಾವನ್ನಪ್ಪಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News