ಉಕ್ರೇನ್ ಯುದ್ಧ ಅಂತ್ಯಕ್ಕೆ ಸಕಲ ನೆರವು ನೀಡಲು ಭಾರತ ಸಿದ್ಧ : ಪ್ರಧಾನಿ ಮೋದಿ

Update: 2024-10-22 16:45 GMT

ನರೇಂದ್ರ ಮೋದಿ , ವ್ಲಾಡಿಮಿರ್ ಪುಟಿನ್ |  PC : PTI 

ಮಾಸ್ಕೊ : ರಶ್ಯ-ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ತನಗೆ ವಿಶ್ವಾಸವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ತಿಳಿಸಿದ್ದಾರೆ. ಉಕ್ರೇನ್ ಯುದ್ಧ ಕೊನೆಗೊಳಿಸಲು ಎಲ್ಲಾ ರೀತಿಯ ನೆರವನ್ನು ನೀಡಲು ಭಾರತ ಸದಾ ಸಿದ್ಧವಿದೆಯೆಂದು ಅವರು ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ರಶ್ಯದ ಕಝಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ವ್ಲಾದಿಮಿರ್ ಜೊತೆ ಮಾತುಕತೆ ನಡೆಸಿದರು.

ಬ್ರಿಕ್ಸ್ ಗುಂಪಿನ ಯಶಸ್ಸನ್ನು ಅಭಿನಂದಿಸಿದ ಅವರು, ‘‘ಹಲವಾರು ರಾಷ್ಟ್ರಗಳು ಅದಕ್ಕೆ ಸೇರ್ಪಡೆಗೊಳ್ಳಲು ಬಯಸುತ್ತಿವೆ ಎಂದರು. ರಶ್ಯ-ಉಕ್ರೇನ್ ಸಮಸ್ಯೆ ಬಗ್ಗೆ ನಾವು ಎಲ್ಲ ಕಡೆಗಳಿಂದಲೂ ಸಂಪರ್ಕದಲ್ಲಿದ್ದೇವೆ. ಎಲ್ಲಾ ಸಂಘರ್ಷವನ್ನು ಮಾತುಕತೆಯ ಮೂಲಕ ಬಗೆಹರಿಸಬಹುದೆಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ನೆರವಾಗಲು ಭಾರತವು ಸದಾ ಸಿದ್ಧವಾಗಿದೆ ’’ ಎಂದು ಮೋದಿ ಅವರು ಪುಟಿನ್ ಜೊತೆಗಿನ ಮಾತುಕತೆಯ ಸಂದರ್ಭ ತಿಳಿಸಿದರು.

ಮೋದಿ ಜೊತೆ ಮಾತುಕತೆ ಸಂದರ್ಭ ಪುಟಿನ್ ಅವರು ಭಾರತದ ಜೊತೆ ರಶ್ಯದ ಸುದೀರ್ಘ ಬಾಂಧವ್ಯವನ್ನು ಶ್ಲಾಘಿಸುತ್ತಾ, ‘‘ ರಶ್ಯನ್ - ಭಾರತೀಯ ಸಂಬಂಧವು ಒಂದು ನಿರ್ದಿಷ್ಟ ಸೌಭಾಗ್ಯಪೂರ್ಣವಾದ ವ್ಯೆಹಾತ್ಮಕ ಪಾಲುದಾರಿಕೆಯಾಗಿದೆ ಹಾಗೂ ಅದು ಸಕ್ರಿಯವಾಗಿ ಬೆಳೆಯಲೆಂದು ಆಶಿಸುತ್ತೇನೆ’’ ಎಂದರು.

ರಶ್ಯದ ಕಝಾನ್‌ನಲ್ಲಿ ನಡೆಯುತ್ತಿಇರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯರಾಷ್ಟ್ರಗಳಾದ ಬ್ರೆಝಿಲ್, ರಶ್ಯ, ಭಾರತ, ಚೀನಾ ಹಾಗೂ ದಕ್ಷಿಣ ರಶ್ಯಕ್ಕೆ ಪ್ರಧಾನಿ ಮೋದಿಯವರ ಈ ವರ್ಷದ ಎರಡನೇ ಭೇಟಿ ಇದಾಗಿದೆ. ಕಳೆದ ಜುಲೈನಲ್ಲಿ ಅವರು ಮಾಸ್ಕೊದಲ್ಲಿ ನಡೆದ ಭಾರತ-ರಶ್ಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿಯೂ ಅವರು ಪುಟಿನ್‌ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು ಮತ್ತು ಅವರಿಗೆ ರಶ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಸೈಂಟ್ ಆ್ಯಂಡ್ರೂ’ ಪ್ರದಾನ ಮಾಡಲಾಗಿತ್ತು.

ರಶ್ಯದ ಕಝಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳಾದ ಬ್ರೆಝಿಲ್, ರಶ್ಯ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕ ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News