ಭಾರತ-ಚೀನಾ ಸಂಬಂಧಗಳಲ್ಲಿ ಪರಸ್ಪರ ವಿಶ್ವಾಸಕ್ಕೆ ಪ್ರಾಮುಖ್ಯತೆ : ಪ್ರಧಾನಿ ಮೋದಿ

Update: 2024-10-23 16:05 GMT
ಪ್ರಧಾನಿ ಮೋದಿ ,  ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ | PC : PTI 

ಕಝಾನ್ : ರಶ್ಯದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ಮೋದಿ ಬುಧವಾರ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಜತೆ ದ್ವಿಪಕ್ಷೀಯ ಸಭೆ ನಡೆಸಿದರು.

ಪರಸ್ಪರ ಗೌರವ ಮತ್ತು ವಿಶ್ವಾಸದ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಿ ಮೋದಿ, ಭಾರತ-ಚೀನಾ ಗಡಿಭಾಗದಲ್ಲಿ 2020ರಿಂದ ನೆಲೆಸಿರುವ ಬಿಕ್ಕಟ್ಟನ್ನು ಕಡಿಮೆಗೊಳಿಸುವ ಕುರಿತ ಇತ್ತೀಚಿನ ಒಪ್ಪಂದವನ್ನು ಸ್ವಾಗತಿಸಿದರು. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿ ಉಳಿಯಬೇಕು. ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸ್ಪಂದನೆಯು ನಮ್ಮ ಸಂಬಂಧಗಳ ಆಧಾರವಾಗಿ ಉಳಿಯಬೇಕು ಎಂದು ಹೇಳಿದ್ದಾರೆ.

ಸಭೆಯ ಬಳಿಕ ಮಾತನಾಡಿದ ಕ್ಸಿಜಿಂಪಿಂಗ್ ` ಕಝಾನ್‍ನಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿರುವುದು ಸಂತಸ ತಂದಿದೆ. ಎರಡೂ ಕಡೆಯವರು ಹೆಚ್ಚಿನ ಸಂಪರ್ಕ, ಸಂವಹನ ಹೊಂದಿರುವುದು ಅತ್ಯಗತ್ಯವಾಗಿದೆ' ಎಂದರು. ಸಭೆಯಲ್ಲಿ ಉಭಯ ನಾಯಕರು ಭಾರತ-ಚೀನಾ ನಡುವೆ ಸ್ಥಿರ, ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಗಳ ಅಗತ್ಯವನ್ನು ದೃಢಪಡಿಸಿದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News