ಕೈದಿಗಳ ವಿನಿಮಯ: ರಶ್ಯ, ಉಕ್ರೇನ್ ಘೋಷಣೆ

Update: 2024-06-01 16:36 GMT

 Photo : NDTV | ಸಾಂದರ್ಭಿಕ ಚಿತ್ರ

ಕೀವ್: ಸುಮಾರು 4 ತಿಂಗಳ ಬಳಿಕ ಮತ್ತೆ ಕೈದಿಗಳ ವಿನಿಮಯ ಪ್ರಕ್ರಿಯೆಯನ್ನು ಉಕ್ರೇನ್ ಮತ್ತು ರಶ್ಯ ಘೋಷಿಸಿದ್ದು ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ಬಳಿಕ 150 ಜನರನ್ನು ಬಂಧಮುಕ್ತಗೊಳಿಸಲಾಗಿದೆ.

4 ನಾಗರಿಕರ ಸಹಿತ 75 ಉಕ್ರೇನ್ ಕೈದಿಗಳನ್ನು ರಶ್ಯ ಬಿಡುಗಡೆಗೊಳಿಸಿದ್ದು ಇವರಲ್ಲಿ 4 ಮಂದಿ ನಾಗರಿಕರು. ಉಳಿದವರು ರಕ್ಷಣಾ ಪಡೆಯ ಸದಸ್ಯರು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ. `ದೀರ್ಘಾವಧಿಯ ಬಳಿಕ ಮತ್ತೊಂದು ಕೈದಿಗಳ ವಿನಿಮಯ ಪ್ರಕ್ರಿಯೆ ನಡೆದಿದ್ದು ಶತ್ರುಗಳ ಬಂಧನದಲ್ಲಿದ್ದ 75 ಮಂದಿಯನ್ನು ವಾಪಾಸು ಕರೆತರಲಾಗಿದೆ. ಜತೆಗೆ, ಯುದ್ಧದ ಸಂದರ್ಭ ಸಾವನ್ನಪ್ಪಿರುವ 212 ಯೋಧರ ಮೃತದೇಹಗಳನ್ನೂ ರಶ್ಯ ಹಸ್ತಾಂತರಿಸಿದೆ ಎಂದು ಯುದ್ಧಕೈದಿಗಳ ವಿನಿಮಯ ಪ್ರಕ್ರಿಯೆಗೆ ಸಂಬಂಧಿಸಿದ ಉಕ್ರೇನ್ ಸಮನ್ವಯ ಸಮಿತಿ ಮಾಹಿತಿ ನೀಡಿದೆ. ಯುಎಇ ಮಧ್ಯಸ್ಥಿಕೆಯಲ್ಲಿ ನಡೆದ ಒಪ್ಪಂದದಂತೆ ಉಕ್ರೇನ್ ಬಂಧಿಸಿದ್ದ 75 ಯುದ್ಧಕೈದಿಗಳನ್ನು ಮರಳಿಸಲಾಗಿದೆ ಎಂದು ರಶ್ಯದ ಅಧಿಕಾರಿಗಳನ್ನು ಉಲ್ಲೇಖಿಸಿ ಆರ್ ಐಎ ಸುದ್ಧಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News