ಅಝರ್ ಬೈಝಾನ್ ವಿಮಾನ ‘ದುರಂತ’ಕ್ಕಾಗಿ ಕ್ಷಮೆಯಾಚಿಸಿದ ಪುಟಿನ್

Update: 2024-12-28 16:51 GMT

ವ್ಲಾದಿಮಿರ್ ಪುಟಿನ್ | PC : PTI

ಮಾಸ್ಕೋ : ಕಝಕಿಸ್ತಾನದಲ್ಲಿ ಕ್ರಿಸ್‌ಮಸ್ ದಿನದಂದು 38 ಮಂದಿಯ ಸಾವಿಗೆ ಕಾರಣವಾದ ಅಝರ್‌ಬೈಜಾನ್ ಏರ್‌ಲೈನ್ಸ್ ವಿಮಾನದ ಪತನವು ಒಂದು ‘ದುರಂತಮಯ ಘಟನೆ’ಯಾಗಿದ್ದು, ಇದಕ್ಕಾಗಿ ತಾನು ಕ್ಷಮೆಯಾಚಿಸುವುದಾಗಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹೇಳಿದ್ದಾರೆ.

ರಶ್ಯದ ವಾಯುಕ್ಷೇತ್ರದಲ್ಲಿ ಈ ಘಟನೆ ನಡೆದಿರುವುದರಿಂದ ತಾನು ಕ್ಷಮೆಯಾಚಿಸುವುದಾಗಿ ಪುಟಿನ್ ಹೇಳಿದ್ದಾರೆಂದು

ಇದರೊಂದಿಗೆ ಅಝರ್‌ಬೈಜಾನ್‌ನ ವಿಮಾನವನ್ನು ರಶ್ಯನ್ ಪಡೆಗಳು ಹೊಡೆದುರುಳಿಸಿರುವುದನ್ನು ಪುಟಿನ್ ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆಯೆಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.

ರಶ್ಯದ ವಾಯುರಕ್ಷಣಾ ವ್ಯವಸ್ಥೆಯು ಅಝರ್‌ಬೈಜಾನ್ ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ವೈಮಾನಿಕ ತಜ್ಞರು ಹೇಳಿದ್ದಾರೆ.

ಕರಕಸ್ತಾನದ ಗ್ರೋಝ್ನಿಯಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದರಿಂದ ರಶ್ಯದ ವಾಯುರಕ್ಷಣಾ ವ್ಯವಸ್ಥೆಗಳು ಪ್ರತಿದಾಳಿ ನಡೆಸಿರುವುದಾಗಿ ರಶ್ಯವು ಶನಿವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಇದು ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ಹೇಳಿಕೊಂಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News