ದಕ್ಷಿಣ ಕೊರಿಯಾ | ವಿಮಾನ ಪತನದಲ್ಲಿ ಮೃತರ ಸಂಖ್ಯೆ 177ಕ್ಕೆ ಏರಿಕೆ
Update: 2024-12-29 12:08 GMT
ಸಿಯೋಲ್ : ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ 181 ಜನರಿದ್ದ ವಿಮಾನವೊಂದು ಪತನಗೊಂಡಿತ್ತು. ಘಟನೆಯಲ್ಲಿ ಮೃತರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
181 ಜನರಿದ್ದ ವಿಮಾನದಲ್ಲಿ ಇಬ್ಬರು ಬದುಕುಳಿದಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಜೆಜು ಏರ್ ಫ್ಲೈಟ್ 2216 ಥೈಲ್ಯಾಂಡ್ ನಿಂದ ಹಿಂದಿರುಗುತ್ತಿದ್ದಾಗ, ದಕ್ಷಿಣ ಜಿಯೋಲ್ಲಾ ಪ್ರಾಂತ್ಯದಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 181 ಮಂದಿಯಲ್ಲಿ 175 ಮಂದಿ ಪ್ರಯಾಣಿಕರು ಮತ್ತು ಆರು ಮಂದಿ ಸಿಬ್ಬಂದಿಗಳು ಸೇರಿದ್ದರು.
ವಿಮಾನ ಪಕ್ಷಿಗಳಿಗೆ ಢಿಕ್ಕಿ ಹೊಡೆದ ಕಾರಣ ಲ್ಯಾಂಡಿಂಗ್ ಗೇರ್ ವೈಫಲ್ಯವಾಗಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಹೇಳಲಾಗಿದೆ.