ವಾಗ್ದಂಡನೆಗೆ ಗುರಿಯಾದ ಅಧ್ಯಕ್ಷರ ಬಂಧನಕ್ಕೆ ದಕ್ಷಿಣ ಕೊರಿಯಾ ವಾರೆಂಟ್
Update: 2024-12-31 08:54 IST

ಯೂನ್ ಸುಕ್ ಯೋಲ್ PC: x.com/tassagency
ಸಿಯೋಲ್: ದೇಶದಲ್ಲಿ ಅಲ್ಪಾಯುಷಿ ಮಿಲಿಟರಿ ಕಾನೂನು ಜಾರಿಗೊಳಿಸಿದ ಪ್ರಯತ್ನಕ್ಕಾಗಿ ವಾಗ್ದಂಡನೆ ಶಿಕ್ಷೆಗೆ ಒಳಗಾಗಿ ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ಬಂಧನಕ್ಕೆ ದಕ್ಷಿಣ ಕೊರಿಯಾ ನ್ಯಾಯಾಲಯ ವಾರೆಂಟ್ ಹೊರಡಿಸಿದೆ ಎಂದು ತನಿಖಾಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.
"ಜಂಟಿ ತನಿಖಾ ಕೇಂದ್ರಗಳು ಮಾಡಿದ ಮನವಿಯ ಅನುಸಾರ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ವಿರುದ್ಧ ಸರ್ಚ್ ವಾರೆಂಟ್ ಮತ್ತು ಬಂಧನ ವಾರೆಂಟ್ ಹೊರಡಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆ ಹೇಳಿದೆ.