ಲೈಂಗಿಕ ಕಿರುಕುಳ ಪ್ರಕರಣ: 50 ಲಕ್ಷ ಡಾಲರ್ ದಂಡ ತೀರ್ಪು ಎತ್ತಿಹಿಡಿದ ಅಮೆರಿಕ ನ್ಯಾಯಾಲಯ; ಟ್ರಂಪ್ ಗೆ ಹಿನ್ನಡೆ
ವಾಷಿಂಗ್ಟನ್: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೇಖಕಿ ಇ.ಜೀನ್ ಕರೋಲ್ ಅವರಿಗೆ ನೀಡಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳ ಮತ್ತು ಮಾನಹಾನಿ ಪ್ರಕರಣಗಳಲ್ಲಿ 50 ಲಕ್ಷ ಡಾಲರ್ ದಂಡ ಪಾವತಿಸುವಂತೆ ನ್ಯಾಯಾಧಿಕಾರಿಗಳು ನೀಡಿದ್ದ ತೀರ್ಪನ್ನು ಅಮೆರಿಕದ ಫೆಡರಲ್ ಅಪೀಲ್ಸ್ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಮ್ಯಾನ್ ಹಾಟನ್ ಡಿಪಾರ್ಟ್ಮೆಂಟ್ ಸ್ಟೋರ್ ನಲ್ಲಿ 1996ರಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕರೋಲ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಕಳೆದ ವರ್ಷ ಒಂಬತ್ತು ದಿನಗಳ ಸಿವಿಲ್ ವಿಚಾರಣೆ ನಡೆಸಿದ ಬಳಿಕ ನ್ಯೂಯಾರ್ಕ್ ನ್ಯಾಯಾಲಯದ ನಿರ್ಣಾಯಕರ ಮಂಡಳಿ ತೀರ್ಪು ನೀಡಿತ್ತು.
ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ 20 ಲಕ್ಷ ಡಾಲರ್ ಮತ್ತು ಎಲ್ಲೆ ಮ್ಯಾಗಝಿನ್ ನ ಅಂಕಣಗಾರ್ತಿ ಕರೋಲ್ ಅವರ ಮಾನಹಾನಿ ಮಾಡಿದ್ದಕ್ಕಾಗಿ 30 ಲಕ್ಷ ಡಾಲರ್ ಪಾವತಿಸುವಂತೆ ತೀರ್ಪು ನೀಡಲಾಗಿತ್ತು.
ಟ್ರಂಪ್ ಈ ಆರೋಪಗಳನ್ನು ಅಲ್ಲಗಳೆದಿದ್ದರು ಹಾಗೂ ಟ್ರಂಪ್ ತಮಗೂ ಲೈಂಗಿಕ ಕಿರುಕುಳ ನೀಡಿದ್ದರು ಹಾಗೂ ತಮಗೆ ಸಾಕ್ಷಿ ಹೇಳಲು ಅವಕಾಶ ನೀಡಿರಲಿಲ್ಲ ಎಂಬ ಆಧಾರದಲ್ಲಿ ತೀರ್ಪನ್ನು ಟ್ರಂಪ್ ಪ್ರಶ್ನಿಸಿದ್ದರು.