ಪುಟಿನ್ ಪದಚ್ಯುತಿ ಸಾಧ್ಯತೆ: ವರದಿ

Update: 2023-07-16 17:04 GMT

Photo: PTI

ಮಾಸ್ಕೊ: ಉಕ್ರೇನ್ ಸಂಘರ್ಷ ಅಂತ್ಯಗೊಳಿಸುವ ಬಗ್ಗೆ ಅಧ್ಯಕ್ಷ ಪುಟಿನ್ ಅವರ ಆಂತರಿಕ ವಲಯದಿಂದಲೇ ತೀವ್ರ ಒತ್ತಡವಿದ್ದು ಪುಟಿನ್ ಅವರ ಪದಚ್ಯುತಿಯ ಸಾಧ್ಯತೆಯಿದೆ ಎಂದು ರಶ್ಯದ ಮಿಲಿಟರಿ ಬ್ಲಾಗರ್(ಸೇನೆಯೊಂದಿಗೆ ನಿಕಟ ಸಂಪರ್ಕವಿರುವ ಬ್ಲಾಗ್ ಬರಹಗಾರ) ಇಗೋರ್ ಗಿರ್ಕಿನ್ ಹೇಳಿದ್ದಾರೆ.

ಯೆವ್ಗಿನಿ ಪ್ರಿಗೊಝಿನ್ ನೇತೃತ್ವದಲ್ಲಿ ನಡೆದ ಸಂಕ್ಷಿಪ್ತ ದಂಗೆಯು ವಿಫಲವಾದರೂ, ರಶ್ಯದಲ್ಲಿ ಅಧಿಕಾರದ ಮರುಹಂಚಿಕೆಗೆ ಹಾಗೂ ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು, ಮಾಸ್ಕೋದ ಪ್ರಾದೇಶಿಕ ಗವರ್ನರ್ ಆಂಡ್ರೆಯ್ ವೊರೊಬ್ಯೋವ್ ಹಾಗೂ ಮಾಸ್ಕೋ ನಗರದ ಗವರ್ನರ್ ಸೆರ್ಗೆಯ್ ಸೊಬ್ಯಾನಿನ್ ಅವರ ಅಧಿಕಾರವನ್ನು ಮೊಟಕುಗೊಳಿಸುವಲ್ಲಿ ಸಫಲವಾಗಿದೆ ಎಂದು ಗಿರ್ಕಿನ್ ಅಭಿಪ್ರಾಯಪಟ್ಟಿದ್ದಾರೆ.

ಓಝೆರೊ ಸಹಕಾರಿ ಎಂದು ಕರೆಯಲ್ಪಡುವ ಪುಟಿನ್ ಅವರ ಆಂತರಿಕ ವಲಯದ, ಲೆನಿನ್ಗ್ರಾಡ್ನಲ್ಲಿ ನೆಲೆಹೊಂದಿರುವ ಒಂದು ಗುಂಪು ಅಧ್ಯಕ್ಷರನ್ನು ಪದಚ್ಯುತಿಗೊಳಿಸಲು ಬಯಸಿದೆ. ರಶ್ಯದ ಮಿಲಿಟರಿ ಕಾರ್ಯಾಚರಣೆ, ರಕ್ಷಣಾ ಕೈಗಾರಿಕಾ ನೆಲೆ, ಯುದ್ಧದ ಬೆಂಗಾವಲು ಪಡೆಯಲ್ಲಿ ಒಡಕು ಮೂಡಿಸಲು ಅವರು ಉದ್ದೇಶಿಸಿದ್ದಾರೆ.

ಅಲ್ಲದೆ ರಕ್ಷಣಾ ಇಲಾಖೆ, ಭದ್ರತಾ ಸಮಿತಿಯ ಕಾರ್ಯದರ್ಶಿ ನಿಕೊಲಾಯ್ ಪಟ್ರುಶೆವ್ರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗಿರ್ಕಿನ್ ಹೇಳಿದ್ದಾರೆ. ವ್ಯಾಗ್ನರ್ ದಂಗೆಯು ಮಿಲಿಟರಿ ನಾಯಕತ್ವ ಸೇರಿದಂತೆ ರಶ್ಯದ ಗಣ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಅಸ್ಥಿರತೆಯನ್ನು ಬಹಿರಂಗಪಡಿಸಿದೆ. ಪುಟಿನ್ ಅವರ ನಾಯಕತ್ವಕ್ಕೆ ಎದುರಾಗಿರುವ ಅಸ್ಥಿರತೆಯನ್ನೂ ಇದು ಪ್ರದರ್ಶಿಸಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News