ಇಸ್ರೇಲ್ ನಡೆಸಿದ ಹತ್ಯಾಕಾಂಡದ ಬಗ್ಗೆ ಅಂತರಾಷ್ಟ್ರೀಯ ತನಿಖೆಗೆ ಖತರ್ ಆಗ್ರಹ

Update: 2023-12-05 17:03 GMT

Photo- PTI

ವಿಶ್ವಸಂಸ್ಥೆ: ಗಾಝಾದಲ್ಲಿನ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸಂಧಾನ ಮಾತುಕತೆಗೆ ಮರಳಲು ಇಸ್ರೇಲ್ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒತ್ತಡ ಹೇರಬೇಕು. ಅಲ್ಲದೆ ಇಸ್ರೇಲ್ ನಡೆಸಿದ ಹತ್ಯಾಕಾಂಡದ ಬಗ್ಗೆ ಅಂತರಾಷ್ಟ್ರೀಯ ತನಿಖೆ ನಡೆಯಬೇಕು ಎಂದು ಖತರ್ ಆಗ್ರಹಿಸಿದೆ.

ಈ ಘೋರ ಅಪರಾಧವನ್ನು ಸುಮಾರು 2 ತಿಂಗಳವರೆಗೆ ಮುಂದುವರಿಯಲು ಅವಕಾಶ ನೀಡಿರುವುದು ಅಂತರಾಷ್ಟ್ರೀಯ ಸಮುದಾಯಕ್ಕೆ ನಾಚಿಕೆಗೇಡಿನ ವಿಷಯವಾಗಿದೆ. ಈ ಅವಧಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಮಾಯಕ ನಾಗರಿಕರ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ಹತ್ಯೆ ಮುಂದುವರಿದಿದೆ ಎಂದು ಖತರ್ ವರಿಷ್ಟ ಶೇಖ್ ತಮೀಮ್ ಬಿನ್ ಹಮದ್-ಅಲ್ ಥಾನಿ ಕಳವಳ ವ್ಯಕ್ತಪಡಿಸಿದ್ದಾರೆ.

ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ಶೃಂಗಸಭೆಯಲ್ಲಿ ಮಾತನಾಡಿದ ಅವರು ‘ಗಾಝಾದಲ್ಲಿ ಕದನ ವಿರಾಮವನ್ನು ನವೀಕರಿಸಲು ಮತ್ತು ಗಾಝಾ ಪಟ್ಟಿಯಲ್ಲಿನ ನಮ್ಮ ಜನರ ಹೊರೆಯನ್ನು ನಿವಾರಿಸಲು ಕೆಲಸ ಮಾಡುತ್ತಿದ್ದೇವೆ. ಆದರೆ ತಾತ್ಕಾಲಿಕ ಕದನ ನಿಲುಗಡೆ ಸಮಗ್ರ ಕದನವಿರಾಮಕ್ಕೆ ಪರ್ಯಾಯವಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News