ಬಂಡುಕೋರರ ಗುರಿ ದಮಾಸ್ಕಸ್ : ಟರ್ಕಿ ಅಧ್ಯಕ್ಷ ಎರ್ಡೋಗನ್

Update: 2024-12-07 14:35 GMT

ಟರ್ಕಿ ಅಧ್ಯಕ್ಷ ತಯ್ಯೀಪ್ ಎರ್ಡೋಗನ್ | PC : PTI

ಅಂಕಾರ : ಸಿರಿಯಾದ ಬಂಡುಕೋರ ಪಡೆ ಅಸ್ಸಾದ್ ಪಡೆಗಳ ವಿರುದ್ಧದ ಮುನ್ನಡೆಯನ್ನು ಮುಂದುವರಿಸುವ ವಿಶ್ವಾಸವಿದೆ ಎಂದು ಟರ್ಕಿ ಅಧ್ಯಕ್ಷ ತಯ್ಯೀಪ್ ಎರ್ಡೋಗನ್ ಹೇಳಿದ್ದಾರೆ.

ಗುರಿ ದಮಾಸ್ಕಸ್ ಆಗಿದೆ. ಈ ಮುನ್ನಡೆ ಯಾವುದೇ ಸಮಸ್ಯೆಯಿಲ್ಲದೆ ಮುಂದುವರಿಯಲಿದೆ ಎಂದು ಆಶಿಸುತ್ತೇನೆ. ಆದರೆ ಬಂಡುಕೋರ ಪಡೆಯ ಹೋರಾಟದ ಲಾಭವನ್ನು ಬಂಡುಕೋರ ಸಂಘಟನೆಗಳು ಪಡೆಯುವುದನ್ನು ನಾವು ಬಯಸುವುದಿಲ್ಲ. ಈ ಬೆಳವಣಿಗೆಯನ್ನು ನಾವು ಬಯಸುವುದಿಲ್ಲ ಎಂದು ಎರ್ಡೋಗನ್ ಹೇಳಿರುವುದಾಗಿ ವರದಿಯಾಗಿದೆ.

ಅಸ್ಸಾದ್ ಆಡಳಿತವನ್ನು ವಿರೋಧಿಸುವ ಬಂಡುಕೋರ ಪಡೆಗೆ ಟರ್ಕಿ ಬೆಂಬಲ ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News