ರಾಯ್ಟರ್ಸ್ ಫೋಟೋಗ್ರಾಫರ್ ಫೆಲೆಸ್ತೀನ್ ನ ಮೊಹಮ್ಮದ್ ಸಲೀಂ ಗೆ 2024 ರ ʼವರ್ಲ್ಡ್ ಪ್ರೆಸ್ ಫೋಟೋ ಆಫ್ ದಿ ಇಯರ್ ಅವಾರ್ಡ್ʼ
ನ್ಯೂಯಾರ್ಕ್: ನೆದರ್ಲ್ಯಾಂಡ್ ಮೂಲದ ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ಕೊಡಮಾಡುವ 2024ರ ಸಾಲಿನ ಪ್ರತಿಷ್ಟಿತ `ವರ್ಲ್ಡ್ ಪ್ರೆಸ್‍ಫೋಟೋ ಆಫ್ ದಿ ಇಯರ್' ಪ್ರಶಸ್ತಿಗೆ ರಾಯ್ಟರ್ಸ್‍ನ ಫೋಟೋಗ್ರಾಫರ್ ಫೆಲೆ ಮುಹಮ್ಮದ್ ಸಲೀಂ ಆಯ್ಕೆಗೊಂಡಿದ್ದಾರೆ.
ಗಾಝಾ ಪಟ್ಟಿಯಲ್ಲಿ 5 ವರ್ಷದ ಮಗುವಿನ ಮೃತದೇಹವನ್ನು ಫೆಲೆಸ್ತೀನಿಯನ್ ಮಹಿಳೆಯೊಬ್ಬರು ತಬ್ಬಿ ಹಿಡಿದಿರುವ ಚಿತ್ರಕ್ಕಾಗಿ 2024ರ ಸಾಲಿನ ಈ ಪ್ರತಿಷ್ಟಿತ ಪುರಸ್ಕಾರಕ್ಕೆ ಮುಹಮ್ಮದ್ ಆಯ್ಕೆಯಾಗಿದ್ದಾರೆ. ದಕ್ಷಿಣ ಗಾಝಾದ ಖಾನ್‍ಯೂನಿಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಯಲ್ಲಿ 2023ರ ಅಕ್ಟೋಬರ್ 17ರಂದು ಈ ಫೋಟೋವನ್ನು ತೆಗೆಯಲಾಗಿದೆ. ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗಾಗಿ ಅವರ ಕುಟುಂಬದವರು ಆಸ್ಪತ್ರೆಯ ಶವಾಗಾರದಲ್ಲಿ ಹುಡುಕುತ್ತಿರುವ ಸಂದರ್ಭ 36 ವರ್ಷದ ಇನಾಸ್ ಅಬು ಮಾಮರ್ ಎಂಬ ಫೆಲೆಸ್ತೀನ್ ಮಹಿಳೆ ಬಟ್ಟೆಯಲ್ಲಿ ಸುತ್ತಿರುವ ತನ್ನ ಸೋದರನ ಪುತ್ರಿಯ ಮೃತದೇಹವನ್ನು ಕೈಗಳಲ್ಲಿ ಹಿಡಿದುಕೊಂಡು ದುಃಖಿಸುತ್ತಿರುವ ಫೋಟೋ ಇದಾಗಿದೆ.
2024ರ ಸಾಲಿನ ಪ್ರಶಸ್ತಿಯನ್ನು ಘೋಷಿಸಿರುವ ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ` ಯುದ್ಧವಲಯದ ವರದಿ ಮಾಡುವಾಗ ಪತ್ರಕರ್ತರು ಎದುರಿಸುವ ಅಪಾಯವನ್ನು ಗುರುತಿಸುವುದು ಬಹುಮುಖ್ಯವಾಗಿದೆ' ಎಂದಿದೆ.