ಉಕ್ರೇನ್ ನಗರ `ನಿಯು-ಯಾರ್ಕ್' ರಶ್ಯ ಪಡೆಯ ವಶಕ್ಕೆ : ವರದಿ

Update: 2024-08-20 16:56 GMT

ಸಾಂದರ್ಭಿಕ ಚಿತ್ರ | PC : NDTV

ಮಾಸ್ಕೋ : ಪೂರ್ವ ಉಕ್ರೇನ್‍ನಲ್ಲಿ ಕಾರ್ಯತಂತ್ರದ ಅತ್ಯಂತ ಪ್ರಮುಖ ನಗರ `ನಿಯು-ಯಾರ್ಕ್' ಮೇಲೆ ತನ್ನ ಪಡೆಗಳು ನಿಯಂತ್ರಣ ಸಾಧಿಸಿವೆ ಎಂದು ರಶ್ಯದ ಮಿಲಿಟರಿ ಮಂಗಳವಾರ ಹೇಳಿದೆ.

ಕಳೆದ ವಾರ ಅನಿರೀಕ್ಷಿತ ಮತ್ತು ಕ್ಷಿಪ್ರ ನಡೆಯೊಂದರಲ್ಲಿ ಉಕ್ರೇನ್ ಪಡೆಗಳು ರಶ್ಯದ ಕಸ್ರ್ಕ್ ನಗರದೊಳಗೆ ನುಗ್ಗಿ ಹಲವು ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದ್ದರೂ ಧೃತಿಗೆಡದ ರಶ್ಯ ಪೂರ್ವ ಉಕ್ರೇನ್‍ನ ಡೊನೆಟ್ಸ್ಕ್ ಪ್ರಾಂತದ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಲು ಮುಂದಾಗಿದೆ.

ಸುಮಾರು 10,000 ಜನಸಂಖ್ಯೆಯನ್ನು ಹೊಂದಿರುವ ನ್ಯೂ-ಯಾರ್ಕ್ ನಗರ ಸ್ಲೋವಿಯನ್ಸ್ಕ್‍ನ ರೈಲ್ವೇ ಮಾರ್ಗದ ಬಳಿಯಿರುವ ಅತ್ಯಂತ ಆಯಕಟ್ಟಿನ ನಗರವಾಗಿದೆ. ನಮ್ಮ ಪಡೆಯ ನಿರಂತರ ಹೋರಾಟದ ಬಳಿಕ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ನೊವ್ಗೊರೊಡ್‍ಸ್ಕೋಯ್ ನಗರ(ಸೋವಿಯತ್ ಒಕ್ಕೂಟದ ಅವಧಿಯಲ್ಲಿ ಈ ಹೆಸರಿತ್ತು)ದ ಮೇಲೆ ನಿಯಂತ್ರಣ ಸಾಧಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News