ಉಕ್ರೇನ್ ಮೇಲೆ ರಶ್ಯದಿಂದ 76ಕ್ಕೂ ಅಧಿಕ ಡ್ರೋನ್‌ಗಳಿಂದ ದಾಳಿ

Update: 2024-09-14 17:12 GMT

ಸಾಂದರ್ಭಿಕ ಚಿತ್ರ - AI

ಕೀವ್ : ರಶ್ಯವು ಶುಕ್ರವಾರ ತಡರಾತ್ರಿ ಕೀವ್ ಮತ್ತಿತರ ಉಕ್ರೇನಿಯನ್ ನಗರಗಳ ಮೇಲೆ ಶನಿವಾರ ನಸುಕಿನಲ್ಲಿ ಸಾಲುಸಾಲಾಗಿ ಡ್ರೋನ್ ದಾಳಿಗಳನ್ನು ನಡೆಸಿದೆ. ರಶ್ಯದ ಆಕ್ರಮಣವನ್ನು ಎದುರಿಸಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಾಯುರಕ್ಷಣೆ ಹಾಗೂ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಉಕ್ರೇನ್‌ಗೆ ಒದಗಿಸುವಂತೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಅಮೆರಿಕ ಸಹಿತ ಮಿತ್ರ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.

ಉಕ್ರೇನ್‌ನ ಕೇಂದ್ರ, ದಕ್ಷಿಣ ಹಾಗೂ ಪೂರ್ವ ಭಾಗದ 12 ಪ್ರಾಂತಗಳ ಮೇಲೆ ರಶ್ಯವು ಉಡಾವಣೆಗೊಳಿಸಿದ್ದ 76 ಶಹೀದ್ ಡ್ರೋನ್‌ಗಳ ಪೈಕಿ 72 ಅನ್ನು ಉಕ್ರೇನ್‌ನ ವಾಯುರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ವಾಯುಪಡೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ನಮ್ಮ ಜನರ ರಕ್ಷಣೆಯನ್ನು ಮುಂದುವರಿಸಲು ನಮಗೆ ವಾಯುರಕ್ಷಣಾ ವ್ಯವಸ್ಥೆ, ವಾಯುಕವಚ ಹಾಗೂ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದು ಝೆಲೆನ್‌ಸ್ಕಿ ಅವರು ಸಂದೇಶ ಜಾಲತಾಣ ಟೆಲಿಗ್ರಾಫ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ರಶ್ಯವು ಶನಿವಾರ ನಸುಕಿನಲ್ಲಿ ನಡೆಸಿದ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಗಳು ಬಂದಿಲ್ಲ. ಆದರೆ ದೇಶದ ವಿವಿಧೆಡೆ ಹಲವಾರು ಕಟ್ಟಡಗಳಿಗೆ ಹಾನಿಯಾಗಿರುವುದಾಗಿ ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News