ಖಂಡಾಂತರ ಕ್ಷಿಪಣಿ ನಿಯೋಜಿಸಿದ ರಶ್ಯ

Update: 2023-09-02 17:48 GMT

ಮಾಸ್ಕೊ, ಸೆ.2: ಅತ್ಯಾಧುನಿಕ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಮುಂಚೂಣಿ ಯುದ್ಧನೆಲೆಯಲ್ಲಿ ನಿಯೋಜಿಸುವ ಮೂಲಕ ರಶ್ಯ ತನ್ನ ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಕ್ಷಿಪಣಿಯು ರಶ್ಯದತ್ತ ಕಣ್ಣು ಹಾಕುವ ಮುನ್ನ ಶತ್ರುಗಳು ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತವೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು. `ಸರ್ಮಾತ್' ಖಂಡಾಂತರ ಕ್ಷಿಪಣಿಯು ಹಲವಾರು ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಕ್ಷಣ ಮಾತ್ರದಲ್ಲಿ ಆಗಸಕ್ಕೆ ನೆಗೆಯುವ ಈ ಕ್ಷಿಪಣಿಗಳು ಶತ್ರುಗಳ ಕಣ್ಗಾವಲು ವ್ಯವಸ್ಥೆಯನ್ನು ತಪ್ಪಿಸಿಕೊಂಡು ಮಿಂಚಿನ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಿವೆ. ಈ ಕ್ಷಿಪಣಿಗಳನ್ನು ಯುದ್ಧದ ಕರ್ತವ್ಯದಲ್ಲಿ ನಿಯೋಜಿಸಲಾಗಿದೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೋಸ್‌ನ ಮುಖ್ಯಸ್ಥ ಯೂರಿ ಬೊರಿಸೊವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News